Bengaluru

ರೇವ್‌ ಪಾರ್ಟಿ ಮೇಲೆ ದಾಳಿ; 13 ಜನರ ಬಂಧನ

ಬೆಂಗಳೂರು; ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ಮಾಡಿರುವ ಪೊಲೀಸರು 31 ಜನರನ್ನು ಬಂಧಿಸಿದ್ದಾರೆ‌.  ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

   ಪಬ್‌ನಲ್ಲಿ 51 ಜನರು ಮಧ್ಯರಾತ್ರಿ 12.30ರ ವೇಳೆಯಲ್ಲೂ ಡಿಜೆ ಹಾಕಿಕೊಂಡು ಪಾರ್ಟಿ ಮಾಡುತ್ತಿದ್ದರು‌. ಈ ವೇಳೆ‌ ಎಲ್ಲರನ್ನೂ ವಶಕ್ಕೆ‌ ಪಡೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ 31 ಜನರು ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆಯಾಗಿದೆ. ಡ್ರಗ್ಸ್‌ ಸೇವಿಸಿದ್ದ ಎಲ್ಲರವನ್ನೂ ಬಂಧಿಸಲಾಗಿದೆ ಎಂದು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

ಸ್ಥಳದಲ್ಲಿ ಎಂಡಿಎಂಎ, ಚರಸ್, ಗಾಂಜಾ ಸೇರಿ ಮೂರು ಲಕ್ಷ ಮೌಲ್ಯದ ಡ್ರಗ್ಸ್ ಸಿಕ್ಕಿದೆ. ಬಂಧಿತ 31 ಮಂದಿ ಆರೋಪಿಗಳ ಪೈಕಿ ಇಬ್ಬರು ಡ್ರಗ್ಸ್ ಪೆಡ್ಲರ್​ಗಳಾಗಿದ್ದಾರೆ. ಪಾರ್ಟಿ ಆಯೋಜಕ ಹರಿಕೃಷ್ಣ, ಡಿಜೆ ಸೆಂಥಿಲ್ ಕುಮಾರ್ ಸೇರಿ 31 ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

Share Post