CrimeDistricts

ಹನುಮ ಜಯಂತಿ ವೇಳೆ ಘರ್ಷಣೆ; ಓರ್ವ ಯುವಕ ಬರ್ಬರ ಹತ್ಯೆ

ಮೈಸೂರು; ಹನುಮ ಜಯಂತಿ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಒಬ್ಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೈಸೂರು ಜಿಲ್ಲೆ ಟಿ.ನರಸೀಪುರ ಪಟ್ಟಣದ ಹೊರವಲಯದಲ್ಲಿ ಈ ಕೃತ್ಯ ಎಸಗಲಾಗಿದೆ. ಕಳೆದ ರಾತ್ರಿ ಈ ಕೃತ್ಯ ಎಸಗಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕ್ಷುಲ್ಲಕ ಕಾರಣಕ್ಕಾಗಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ. ಶ್ರೀರಾಂಪುರ ಕಾಲೋನಿಯವನಾದ ವೇಣುಗೋಪಾಲ್‌ ಹತ್ಯೆಯಾದ ಯುವಕನಾಗಿದ್ದಾನೆ. ಈಗ ಯುವ ಬ್ರಿಗೇಡ್‌ ಕಾರ್ಯಕರ್ತನಾಗಿದ್ದ ಎಂದು ತಿಳಿದುಬಂದಿದೆ. ಹನುಮ ಜಯಂತಿ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಆ ಬಳಿಕ ದುಷ್ಕರ್ಮಿಗಳು ಬಾಟಲಿಯಿಂದ ಇರಿದು ವೇಣುಗೋಪಾಲ್‌ನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹನುಮ ಜಯಂತಿ ವೇಳೆ ಭಾರತ ಮಾತೆ ಫೋಟೋ ಮುಂದೆ ಪುನೀತ್‌ ರಾಜ್‌ಕುಮಾರ್‌ ಫೋಟೋ ಇರಿಸಲಾಗಿತ್ತು. ವ್ಯಕ್ತಿ ಫೋಟೋ ಬೇಡ ಎಂದು ಹತ್ಯೆಯಾದ ವೇಣುಗೋಪಾಲ್‌ ತೆಗೆಸಿದ್ದರು. ಈ ಕಾರಣಕ್ಕಾಗಿಯೇ ಕೊಲೆ ನಡೆದಿರಬಹುದು ಎಂದು ಕೊಲೆಯಾದ ವೇಣುಗೋಪಾಲ್‌ ಅವರ ಪತ್ನಿ ಆರೋಪ ಮಾಡಿದ್ದಾರೆ.

ಈ ಬಗ್ಗೆ ಟಿ.ನರಸೀಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

Share Post