LifestyleNational

ಎರಡನೇ ಶನಿವಾರ ರಜೆ ಘೋಷಣೆ ಹಿಂದಿನ ಕುತೂಹಲದ ಕಥೆ ಇದು

ಎರಡನೇ ಶನಿವಾರ ರಜೆ ಇರುತ್ತದೆ. ಪ್ರತಿಯೊಬ್ಬರೂ ಈ ರಜಾದಿನವನ್ನು ಆನಂದಿಸುತ್ತಾರೆ. ತಿಂಗಳ ಎರಡನೇ ಶನಿವಾರಕ್ಕಾಗಿ ಕಾಯುತ್ತಾರೆ.  ಈ ದಿನ ರಜೆ ಕೊಡಲು ಕಾರಣವೇನು ಗೊತ್ತಾ..? ಭಾರತದಲ್ಲಿ ಎರಡನೇ ಶನಿವಾರವನ್ನು ರಜೆ ಎಂದು ಘೋಷಿಸಿರುವುದರ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ.

19 ನೇ ಶತಮಾನದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬರು ಅತ್ಯಂತ ಪ್ರಾಮಾಣಿಕ ಸಹಾಯಕನನ್ನು ಹೊಂದಿದ್ದರು. ಆತ ತಂದೆ-ತಾಯಿಯನ್ನು ಭೇಟಿಯಾಗಲು ರಜಾ ದಿನಗಳಲ್ಲಿ ಮಾತ್ರ ತಮ್ಮ ಗ್ರಾಮಕ್ಕೆ ಹೋಗುತ್ತಿದ್ದ. ಅದು ವರ್ಷಗಳ ಕಾಲ ನಡೆಯಿತು. ದಿನಗಳು ಕಳೆದಂತೆ ಕೆಲಸದಲ್ಲಿ ಆತನ ಜವಾಬ್ದಾರಿಯೂ ಹೆಚ್ಚಿತು. ಅದಕ್ಕೇ ರಜೆ ಕಡಿಮೆ, ಕೆಲಸ ಜಾಸ್ತಿಯಾಯಿತು. ಅಂತಹ ಸಂದರ್ಭಗಳಲ್ಲಿ ಊರಿಗೆ ಹೋಗಲು ಆಗಲಿಲ್ಲ. ಆಗ ಮಗನನ್ನು ನೋಡಲು ಪೋಷಕರೇ ಇಲ್ಲಿಗೆ ಬಂದರು. ಅವರು ತಮ್ಮ ಮಗನನ್ನು ತಮ್ಮೊಂದಿಗೆ ಕಳುಹಿಸಲು ರಜೆ ಕೇಳಲು ಬ್ರಿಟಿಷ್ ಅಧಿಕಾರಿಯ ಬಳಿಗೆ ಹೋದರು.

ಆಗ ಬ್ರಿಟಿಷ್ ಅಧಿಕಾರಿಗೆ ತಿಳಿಯಿತು, ತನ್ನ ಕೈಕೆಳಗೆ ಕೆಲಸ ಮಾಡುವ ಸಹಾಯಕನಿಗೆ ತನ್ನ ಹೆತ್ತವರನ್ನು ಭೇಟಿ ಮಾಡಲೂ ಸಮಯವೂ ಸಿಗುತ್ತಿಲ್ಲವೆಂದು. ನಿಷ್ಠಾವಂತ ಮತ್ತು ಪ್ರಾಮಾಣಿಕ ಸಹಾಯಕನಾಗಿರುವ ಆತನಿಗೆ ಹೆತ್ತವರನ್ನು ನೋಡಲೂ ಆಗುತ್ತಿಲ್ಲವೇ ಎಂದು ಮರುಗಿದರು. ಕೂಡಲೇ  ಸಹಾಯಕನಿಗಾಗಿ ಅಂದಿನಿಂದ ಪ್ರತಿ ತಿಂಗಳ ಎರಡನೇ ಶನಿವಾರವನ್ನು ರಜೆ ಎಂದು ಘೋಷಿಸಿ ಆ ಬ್ರಿಟೀಷ್‌ ಅಧಿಕಾರಿ. ಬ್ರಿಟಿಷ್ ಸರ್ಕಾರ ಇದನ್ನು ಅಧಿಕೃತ ರಜಾದಿನವೆಂದು ಘೋಷಿಸಿತು.

ಆದರೆ ಈ ಸಂಪ್ರದಾಯವನ್ನು ಭಾರತ ಸರ್ಕಾರವು ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ಇದು ಎರಡನೇ ಶನಿವಾರ ರಜೆ ಘೋಷಣೆಯ ಹಿಂದಿನ ಕಥೆ.

Share Post