ಧರಣಿ ವಾಪಸ್ ಪಡೆದ ಬಿಜೆಪಿ; ಇಂದಿನ ಕಲಾಪ ಸರಾಗ
ಬೆಂಗಳೂರು; ಗ್ಯಾರೆಂಟಿ ಯೋಜನೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರಿಂದ ಎರಡನೇ ದಿನದ ಕಲಾಪ ಪೂರ್ತಿ ವೇಸ್ಟ್ ಆಗಿತ್ತು. ನಿನ್ನೆ ಪೂರ್ತಿ ಬಿಜೆಪಿಯ ಪ್ರತಿಭಟನೆಯಲ್ಲೇ ಕಲಾಪ ವ್ಯರ್ಥವಾಗಿತ್ತು. ಇಂದು ಕೂಡಾ ಕಲಾಪ ಪ್ರಾರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಗದ್ದಲ ಶುರು ಮಾಡಿದರು. ಆದ್ರೆ ಸ್ಪೀಕರ್ ಯು.ಟಿ.ಖಾದರ್ ಅವರು ಚರ್ಚೆಗೆ ಅವಕಾಶ ಕೊಡುತ್ತೇವೆ. ಮೊದಲು ಪ್ರಶ್ನೋತ್ತರ ವೇಳೆ ಮುಗಿಯಲಿ ಎಂದು ಹೇಳಿದರು. ಇದಕ್ಕೆ ಬೆಲೆ ಕೊಟ್ಟ ಬಿಜೆಪಿ ಸದಸ್ಯರು ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.
ಬಿಜೆಪಿ ಸದಸ್ಯರು ಪ್ರತಿಭಟನೆ ವಾಪಸ್ ಪಡೆದಿದ್ದರಿಂದ ಕಲಾಪ ಸರಾಗವಾಗಿ ನಡೆಯುತ್ತಿದೆ. ನಾಡಿನ ಸಮಸ್ಯೆಗಳ ಬಗ್ಗೆ ಆಯಾ ಕ್ಷೇತ್ರದ ಶಾಸಕರು ಸದನದ ಗಮನಕ್ಕೆ ತರುತ್ತಿದ್ದಾರೆ. ಸಂಬಂಧಪಟ್ಟ ಸಚಿವರು ಇದಕ್ಕೆ ಉತ್ತರ ಒದಗಿಸುತ್ತಿದ್ದಾರೆ.