ಅಕ್ಕಿ ಫೈಟ್; ಪೀಯೂಷ್ ಗೋಯೆಲ್ ಹಾರಿಕೆ ಉತ್ತರ ಕೊಟ್ಟಿದ್ದಾರೆ – ಕೆ.ಹೆಚ್.ಮುನಿಯಪ್ಪ
ಬೆಂಗಳೂರು; ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯೆಲ್ ಅಕ್ಕಿ ನೀಡುವ ವಿಚಾರದಲ್ಲಿ ಹಾರಿಕೆಯ ಉತ್ತರ ಕೊಟ್ಟಿದ್ದಾರೆ ಎಂದು ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ದೆಹಲಿಯಲ್ಲಿ ಸಚಿವರ ಭೇಟಿ ಬಳಿಕ ಮಾತನಾಡಿದ ಅವರು, ನಾವು ಬಡವರಿಗೆ ಅಕ್ಕಿ ಕೊಡಬೇಕಿದೆ. ಅಕ್ಕಿ ಪೂರೈಕೆ ಮಾಡಿ ಎಂದು ಮನವಿ ಮಾಡಿದೆವು. ಆದ್ರೆ ಅವರು ಅಕ್ಕಿ ನೀಡೋಕೆ ಆಗೋದಿಲ್ಲ ಅಂತ ಹಾರಿಕೆಯ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.
ಗೋಯೆಲ್ ಅವರು ಹೆಚ್ಚುವರಿ ಅಕ್ಕಿ ಪೂರೈಸೋದಕ್ಕೆ ಆಗೋದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅಕ್ಕಿಗಾಗಿ ನಮ್ಮದೇ ಆದ ದಾರಿಯನ್ನು ನಾವು ಕಂಡುಕೊಳ್ಳಬೇಕಿದೆ. ನಾವು ಅಶ್ವಾಸನೆ ಕೊಟ್ಟಂತೆ ಅಕ್ಕಿಯನ್ನು ಕೊಟ್ಟೇ ಕೊಡುತ್ತೇವೆ ಎಂದು ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.