HealthInternational

ಯೋಗಾ ಎಂದರೇನೇ ಎಲ್ಲರೂ ಒಟ್ಟುಗೂಡುವುದು; ಪ್ರಧಾನಿ ನರೇಂದ್ರ ಮೋದಿ

ನ್ಯೂಯಾರ್ಕ್‌; ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಯೋಗಾ ಕಾರ್ಯಕ್ರಮ ನಡೆಯಿತು. ಅದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ, ಮಹಾತ್ಮಾಗಾಂಧಿ ಪ್ರತಿಮೆಗೆ ನಮಿಸಿದರು. ಇದೇ ವೇಳೆ ಮೋದಿ ಮಾತನಾಡಿದ್ದಾರೆ. ಇಡೀ ಮಾನವೀಯತೆ ಸಂಧಿಸುವಲ್ಲಿ ಎಲ್ಲರೂ ಒಟ್ಟುಗೂಡಿದ್ದೇವೆ. ನಿಮ್ಮೆಲ್ಲರನ್ನೂ ನೋಡಲು ನನಗೆ ಸಂತೋಷವಾಗಿದೆ. ಇಲ್ಲಿಗೆ ಬಂದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಮೋದಿ ಹೇಳಿದ್ದಾರೆ.

ಇಲ್ಲಿ ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರೀಯತೆಗಳನ್ನು ಪ್ರತಿನಿಧಿಸಲಾಗಿದೆ. ಅಂದಹಾಗೆ ಯೋಗಾ ಎಂದರೇನೇ ಒಂದಾಗುವುದು. ಆದ್ರಿಂದ ಎಲ್ಲರೂ ಇಲ್ಲಿ ಒಂದಾಗುತ್ತಿರುವುದು ಯೋಗದ ಇನ್ನೊಂದು ರೂಪ ಎಂದು ಮೋದಿ ಹೇಳಿದರು. ಯೋಗಾ ಪೇಟೆಂಟ್‌ ಮುಕ್ತವಾಗಿದೆ. ಯೋಗಾ ನಿಮ್ಮ ವಯಸ್ಸು, ಲಿಂಗ ಮತ್ತು ಫಿಟ್‌ನೆಸ್ ಮಟ್ಟಕ್ಕೆ ಹೊಂದಿಕೊಳ್ಳುತ್ತದೆ ಎಂದು ಮೋದಿ ಹೇಳಿದರು.

ಯೋಗಾ ಒಂದು ಜೀವನ ವಿಧಾನ. ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿರುವ ಸಮಗ್ರ ವಿಧಾನ. ಸ್ವಯಂ ಸಾಂಗತ್ಯ, ಇತರರೊಂದಿಗೆ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಇರುವ ಮಾರ್ಗ ಎಂದು ಮೋದಿ ಹೇಳಿದ್ದಾರೆ.

Share Post