CrimeNational

ಪ್ರೇಮಿಗಳಿಬ್ಬರನ್ನೂ ಕೊಂದು ಮೊಸಳೆಗಳಿಗೆ ಹಾಕಿದ ಪೋಷಕರು..!

ರತನ್‌ ಬಸಾಯ್‌; ಮರ್ಯಾದಾ ಹತ್ಯೆಗಳ ಆಗಾಗ ನಡೆಯುತ್ತಲೇ ಇವೆ. ಅದೇ ರೀತಿಯ ಅಮಾನುಷ ಕೃತ್ಯ ಮಧ್ಯಪ್ರದೇಶದಲ್ಲಿ ನಡೆದಿದೆ. ಇಬ್ಬರು ಪ್ರೇಮಿಗಳನ್ನು ಹುಡುಗಿ ಮನೆಯವರು ಕೊಲೆ ಮಾಡಿ, ಮೊಸಳೆಗಳಿರುವ ನದಿಗೆ ಎರಡೂ ದೇಹಗಳನ್ನು ಎಸೆದಿದ್ದಾರೆ. ಮಧ್ಯಪ್ರದೇಶದ ರತನ್‌ ಬಸಾಯ್‌ ಎಂಬಲ್ಲಿ ಈ ಘಟನೆ ನಡೆದಿದೆ.

ಶಿವಾನಿ ತೋಮರ್ ಹಾಗೂ ರಾಧೆ ಶ್ಯಾಮ್ ತೋಮರ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಹುಡುಗಿಯ ಮನೆಯವರಿಗೆ ಇದು ಇಷ್ಟವಿರಲಿಲ್ಲ. ಹೀಗಾಗಿ ಇಬ್ಬರನ್ನೂ ಕೊಲೆ ಮಾಡಲಾಗಿದೆ. ನಂತರ ಎರಡೂ ದೇಹಗಳಿಗೆ ಕಲ್ಲು ಕಟ್ಟಿ ಮೊಸಳೆಗಳಿರುವ ನದಿಗೆ ಎಸೆಯಲಾಗಿದೆ. ಇಬ್ಬರೂ ಕಾಣೆಯಾಗಿದ್ದರಿಂದ ಹುಡುಗನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.

ಮೊದಲು ಪೊಲೀಸರು ಇಬ್ಬರೂ ಓಡಿಹೋಗಿ ಮದುವೆಯಾಗಿರಬಹುದು ಎಂದು ಭಾವಿಸಿದ್ದರು. ಆದ್ರೆ ಎಷ್ಟು ಹುಡುಕಿದರೂ ಅವರ ಬಗ್ಗೆ ಮಾಹಿತಿ ಸಿಗಲಿಲ್ಲ. ಕೊನೆಗೆ ಹುಡುಗಿಯ ತಂದೆಯನ್ನು ಕರೆಸಿ ವಿಚಾರಣೆ ನಡೆಸಿದಾಗ, ಕೊಂದು ಚಂಬಲ್‌ ನದಿಯಲ್ಲಿ ಹಾಕಿರುವುದಾಗಿ ಒಪ್ಪಿಕೊಂಡಿದ್ದಾರೆ.

Share Post