ಕೇಂದ್ರ ಕೊಡ್ತಿಲ್ಲ, ಆದರೂ 10 ಕೆಜಿ ಆಹಾರ ಧ್ಯಾನ್ಯ ಕೊಡ್ತೀವಿ; ಸಚಿವ ಕೆ.ಹೆಚ್.ಮುನಿಯಪ್ಪ
ಬೆಂಗಳೂರು; ಅಕ್ಕಿ ಸಂಗ್ರಹವಿದ್ದರೂ ಕೇಂದ್ರ ಸರ್ಕರ ನಮಗೆ ಅಕ್ಕಿ ಪೂರೈಕೆ ಮಾಡುತ್ತಿಲ್ಲ. ಆದರೂ ಕೂಡಾ ಹೇಳಿದ ಸಮಯಕ್ಕೆ ನಾವು ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ ಹತ್ತ ಕೆಜಿ ಆಹಾರ ಧಾನ್ಯಗಳನ್ನು ಒದಗಿಸುತ್ತೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾವು ಕೊಟ್ಟ ಆಶ್ವಾಸನೆಯನ್ನು ಈಡೇರಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.
ನಾವು ಹಣ ಕೊಡುತ್ತೇವೆ ಅಕ್ಕಿ ಪೂರೈಕೆ ಮಾಡಿ ಅಂದರೆ ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಆದರೂ ನಾವು ಬೇರೆ ರಾಜ್ಯಗಳ ಜೊತೆ ಮಾತನಾಡುತ್ತಿದ್ದೇವೆ. ತೆಲಂಗಾಣ ಸಚಿವರ ಜೊತೆಗೂ ನಾನು ಮಾತನಾಡಿದ್ದೇನೆ ಎಂದು ಕೆ.ಹೆಚ್.ಮುನಿಯಪ್ಪ ಹೇಳಿದರು. ನಾನು ಅಂತ್ಯೋದಯ, ಬಿಪಿಎಲ್ ಕಾರ್ಡ್ದಾರರಿಗೆ ಅಕ್ಕಿ, ರಾಗಿ ಹಾಗೂ ಜೋಳವನ್ನು ವಿತರಣೆ ಮಾಡುತ್ತೇವೆ. ಯಾರು ಅಡ್ಡಿಪಡಿಸಿದರೂ ಸಮಯಕ್ಕೆ ಸರಿಯಾಗಿ ನಾವು ಕೊಟ್ಟ ಆಶ್ವಾಸನೆಯನ್ನು ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.