ಮತಾಂತರ ನಿಷೇಧ ಕಾಯ್ದೆಯಲ್ಲಿ ತಿದ್ದುಪಡಿಗೆ ಕ್ಯಾಬಿನೆಟ್ ತೀರ್ಮಾನ
ಬೆಂಗಳೂರು; ಪಠ್ಯ ಪರಿಷ್ಕರಣೆಗೆ ತೀರ್ಮಾನ ಮಾಡಿರುವ ರಾಜ್ಯ ಕ್ಯಾಬಿನೆಟ್ ಇಂದು ಮತ್ತೊಂದು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಮತಾಂತರ ನಿಷೇಧ ಕಾಯ್ದೆಗೂ ತಿದ್ದುಪಡಿ ತರಲು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಮತಾಂತರ ನಿಷೇಧ ಕಾಯ್ದೆಯಲ್ಲಿ ಬಿಜೆಪಿ ಸರ್ಕಾರ ಒಂದಷ್ಟು ಅಂಶಗಳನ್ನು ಸೇರಿಸಿತ್ತು. ಅವುಗಳನ್ನು ಕೈಬಿಟ್ಟು ಕಾಯ್ದೆಗೆ ತಿದ್ದುಪಡಿ ತರಲು ಕ್ಯಾಬಿನೆಟ್ ತೀರ್ಮಾನಿಸಿದೆ, ಜುಲೈನಲ್ಲಿ ನಡೆಯುವ ಅಧಿವೇಶನದಲ್ಲೇ ಮತಾಂತರ ನಿಷೇಧ ತಿದ್ದುಪಡಿ ಮಸೂದೆ ಮಂಡನೆ ಮಾಡಲು ಕೂಡಾ ತೀರ್ಮಾನ ಕೈಗೊಳ್ಳಲಾಗಿದೆ.