ಪಟ್ಟಿ ನೋಡಿ ಮೋದಿ ನಿಜವಾಗಲೂ ಕೋಪಿಸಿಕೊಂಡ್ರಾ..?; ಕಾರಣ ಗೊತ್ತೇ..?
ನವದೆಹಲಿ; ಬಿಜೆಪಿಯ ಮೊದಲ ಪಟ್ಟಿ ಫೈನಲ್ ಮಾಡೋದಕ್ಕಾಗಿ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಕಸರತ್ತು ನಡೆಯುತ್ತಿದೆ. ಆದ್ರೆ ಇನ್ನೂ ಫೈನಲ್ ಮಾಡೋದಕ್ಕೆ ಆಗಿಲ್ಲ. ಇದಕ್ಕೆ ಕಾರಣ ಪ್ರಧಾನಿ ಮೋದಿಯವರ ಕೋಪವೇ ಕಾರಣ ಎಂದು ಹೇಳಲಾಗುತ್ತಿದೆ. ರಾಜ್ಯ ನಾಯಕರು ಸಂಭಾವ್ಯರ ಪಟ್ಟಿಯನ್ನು ಸಿದ್ಧ ಮಾಡಿ ದೆಹಲಿಗೆ ತೆಗೆದುಕೊಂಡು ಹೋಗಿದ್ದರು. ಈ ಪಟ್ಟಿಯನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಕೋಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಪಟ್ಟಿಯಲ್ಲಿ ನಾಯಕರು ತಮ್ಮ ಮಕ್ಕಳಿಗೆ ಟಿಕೆಟ್ ಕೇಳಿದ್ದಾರೆ. ಜೊತೆಗೆ ಬಹುತೇಕ ಹಳಬರ ಹೆಸರುಗಳೇ ಪಟ್ಟಿಯಲ್ಲಿವೆ. ಇದಕ್ಕೆ ಮೋದಿ ಕೋಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೋದಿಯವರು ಕೋಪಿಸಿಕೊಂಡಿರುವುದರಿಂದ ಮತ್ತೆ ಸರ್ವೇ ಮಾಡಿಸಿ, ಪಟ್ಟಿ ಪರಿಷ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಹಲವು ಹಾಲಿ ಶಾಸಕರಿಗೆ ಬದಲಾಗಿ ಹೊಸಬರಿಗೆ ಮಣೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.