BengaluruPolitics

ಯಾರ ನಂಬರ್‌ ಬಗ್ಗೆ ಮಾತಾಡುವಷ್ಟು ಶಕ್ತಿ ನನಗಿಲ್ಲ; ಡಿ.ಕೆ.ಶಿವಕುಮಾರ್

ಬೆಂಗಳೂರು;‌ ಯಾರ ನಂಬರ್‌ ಎಷ್ಟು ಎಂಬುದರ ಬಗ್ಗೆ ಮಾತನಾಡುವಷ್ಟು ಶಕ್ತಿ ನನಗಿಲ್ಲ. ಗೆದ್ದ ಎಲ್ಲಾ 135 ಶಾಸಕರೂ ಕಾಂಗ್ರೆಸ್‌ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸದಾಶಿನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನನ್ನ ಅಧ್ಯಕ್ಷತೆಯಲ್ಲಿ 135 ಸ್ಥಾನ ಗೆದ್ದಿದ್ದೇವೆ. ನಮಗೆ ಸಮಯವಿರಲಿಲ್ಲ. ಇನ್ನೂ ಸ್ವಲ್ಪ ಪ್ಲ್ಯಾನ್‌ ಮಾಡಿದ್ದಿದ್ದರೆ ಮತ್ತಷ್ಟು ಸ್ಥಾನಗಳು ನಮ್ಮದಾಗುತ್ತಿದ್ದವು. ಸಿಎಂ ಮಾಡುವ ವಿಚಾರವನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಇವತ್ತು ನನ್ನ ಹುಟ್ಟುಹಬ್ಬವಿದೆ. ಹೀಗಾಗಿ ಮೊದಲು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ನನ್ನ ಗುರುಗಳನ್ನು ಭೇಟಿಯಾಗಲು ಹೋಗುತ್ತಿದ್ದೇನೆ. ಅನಂತರ ದೆಹಲಿಗೆ ಪ್ರಯಾಣ ಮಾಡುತ್ತೇನೆ. ಅದು ಎಷ್ಟು ಹೊತ್ತಿಗೆ ಎಂದು ಇನ್ನೂ ಡಿಸೈಡ್‌ ಆಗಿಲ್ಲ. ವಿಮಾನ ಎಷ್ಟು ಹೊತ್ತಿಗೆ ಇದೆ ಎಂದು ನೋಡಿಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ.

 

Share Post