BengaluruCinemaCrime

ಪಾರ್ಕಿಂಗ್‌ ವಿಚಾರವಾಗಿ ಜಗಳ; ನಟಿ ಸಂಜನಾಗೆ ಕೊಲೆ ಬೆದರಿಕೆ ಆರೋಪ

ಬೆಂಗಳೂರು; ಮನೆ ಹತ್ತಿದವರು ಪಾರ್ಕಿಂಗ್‌ ವಿಚಾರದಲ್ಲಿ ಜಗಳ ಮಾಡಿದ್ದು, ಕೊಲೆ ಬೆದರಿಕೆ ಹಾಕಿದ್ದಾರೆಂದು ನಟಿ ಸಂಜ ಗಲ್ರಾನಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ನಟಿ ಸಂಜನಾ ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂಜನಾ ಈಗ ಬಾಣಂತಿಯಾಗಿದ್ದು, ಮನೆಯಲ್ಲೇ ಇದ್ದು ಮಗುವಿನ ಲಾಲನೆ ಮಾಡುತ್ತಿದ್ದಾರೆ. ಇವರ ಮನೆ ಧೂಪನಹಳ್ಳಿಯಲ್ಲಿದ್ದು, ಹತ್ತಿರದಲ್ಲೇ ಯಶೋಧಮ್ಮ ಹಾಗೂ ರಾಜಣ್ಣ ಎಂಬುವವರು ಕೂಡಾ ವಾಸವಿದ್ದಾರೆ. ಇವರಿಬ್ಬರೇ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಂಜನಾ ಆರೋಪಿಸಿದ್ದಾರೆ.

ಯಶೋಧಮ್ಮ ಹಾಗೂ ರಾಜಣ್ಣ ಅವರು ರಸ್ತೆಗೆ ಅಡ್ಡಲಾಗಿ ಕಾರುಗಳನ್ನು ನಿಲ್ಲಿಸುತ್ತಾರೆ. ಇದನ್ನು ನಾನು ಪ್ರಶ್ನೆ ಮಾಡಿದೆ. ಆಗ ನನ್ನ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ನಾವು ಇಲ್ಲಿ ನಲವತ್ತು ವರ್ಷದಿಂದ ಇದ್ದೇವೆ. ನೀವು ವೇಶ್ಯೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಕೊಲೆ ಬೆದರಿಕೆ ಕೂಡಾ ಹಾಕಿದ್ದಾರೆ ಎಂದು ಸಂಜನಾ ಆರೋಪಿಸಿದ್ದಾರೆ.

Share Post