CinemaNational

ಟಾಲಿವುಡ್‌ನಲ್ಲಿ ಶ್ರೀಲೀಲಾಗೆ ಡಿಮ್ಯಾಂಡ್‌; ಬಾಲಯ್ಯ ಸಿನಿಮಾದಲ್ಲಿ ಕನ್ನಡ ಕುವರಿ

ಹೈದರಾಬಾದ್‌; ಕನ್ನಡದ ಕುವರಿ ಶ್ರೀಲೀಲಾಗೆ ಟಾಲಿವುಡ್‌ನಲ್ಲಿ ಡಿಮ್ಯಾಂಡ್‌ ಹೆಚ್ಚಾಗುತ್ತಿದೆ. ಧಮಾಕಾ ಚಿತ್ರದ ಸಕ್ಸಸ್‌ ನಂತರ ಶ್ರೀಲೀಲಾ ಹಲವು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ವಿಶೇಷ ಏನು ಅಂದ್ರೆ ಖ್ಯಾತ ನಟ ಬಾಲಕೃಷ್ಣ ಸಿನಿಮಾದಲ್ಲಿ ಕೂಡಾ ಶ್ರೀಲೀಲಾ ನಟಿಸ್ತಿರೋದು.

ಕಿಸ್, ಭರಾಟೆ, ಬೈ ಟು ಲವ್ ಮೂಲಕ ಕನ್ನಡದಲ್ಲಿ ಶ್ರೀಲೀಲಾ ಗಮನ ಸೆಳೆದಿದ್ದರು. ಆದ್ರೆ ಇದೀಗ ಅವರು ತೆಲುಗು ಚಿತ್ರಗಳಿಗೆ ಫಿಕ್ಸ್‌ ಆಗಿದ್ದಾರೆ. ಅಲ್ಲೇ ಸೆಟ್ಲ್‌ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸ್ತಾ ಇದ್ದು, ಬಾಲಯ್ಯ ಸಿನಿಮಾದಲ್ಲೂ ಇವರು ನಟಿಸುತ್ತಿದ್ದಾರೆ. ಸದ್ಯ ಶ್ರೀಲೀಲಾ ಏಳು ಚಿತ್ರಗಳಲ್ಲಿ ನಟಿಸುತ್ತಿದ್ದಾರಂತೆ.

ಅನಿಲ್ ರವಿಪುಡಿ ನಿರ್ದೇಶನದ NBK 108 ಚಿತ್ರದಲ್ಲಿ ತ್ರಿಷಾ, ಕಾಜಲ್ ಅಗರ್‌ವಾಲ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಯ್ಯ ಅವರ ತಂಗಿ ಪಾತ್ರದಲ್ಲಿ ಶ್ರೀಲೀಲಾ ನಟಿಸಲಿದ್ದಾರಂತೆ. ಆ ಪಾತ್ರ ಚಿತ್ರದಲ್ಲಿ ಪ್ರಮುಖವಾಗಿರುವುದರಿಂದ ಶ್ರೀಲೀಲಾ ಒಪ್ಪಿಕೊಂಡಿದ್ದಾರೆ.

Share Post