CrimeDistricts

ACBಯಿಂದ ಭ್ರಷ್ಟರ ಬೇಟೆ ; ಪೈಪ್‌ನಲ್ಲೂ ಕಂತೆ ಕಂತೆ ಹಣ..!

ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದ ಸರ್ಕಾರದ ವಿವಿಧ ಇಲಾಖೆಗಳ ೧೫ ಅಧಿಕಾರಿಗಳ ಹಲವು ಆಸ್ತಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ೪೦೮ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಬೆಳಗ್ಗೆ 68 ಜಾಗದಲ್ಲಿ ಎಸಿಬಿ ದಾಳಿ ನಡೆಸಿತ್ತು. ಈಗ ಹೆಚ್ಚುವರಿಯಾಗಿ, ಸುಮಾರು 15 ಸ್ಥಳಗಳು ಸೇರ್ಪಡೆಗೊಂಡಿವೆ. ಒಟ್ಟು ೮೦ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, ಬಿ ಗ್ರೂಪ್‌, ಸಿ ಗ್ರೂಪ್‌ ನೌಕರರ ಮನೆಗಳಲ್ಲೂ ಕೋಟಿ ಕೋಟಿ ಹಣ ಪತ್ತೆಯಾಗಿದೆ.

ಪೈಪ್ ನಲ್ಲಿ 5 ಲಕ್ಷ ರೂಪಾಯಿ ಪತ್ತೆ..!
ಕಲಬುರಗಿಯಲ್ಲಿ ಭ್ರಷ್ಟ ಅಧಿಕಾರಿಯ ಮನೆಯ ಪೈಪ್ ನಲ್ಲಿಯೂ ಕಂತೆ ಕಂತೆ ಹಣ ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು ಆಗಮಿಸುತ್ತಿದ್ದಂತೆ ಅಧಿಕಾರಿ ಶಾಂತಗೌಡ ಮತ್ತು ಕುಟುಂಬ ನೀರಿನ ಪೈಪ್ ನಲ್ಲಿ ಹಣ ಬಚ್ಚಿಟ್ಟಿದ್ದರು. ಹೀಗಾಗಿ ಎಸಿಬಿ ಅಧಿಕಾರಿಗಳು ಪ್ಲಂಬರ್‌ನನ್ನು ಕರೆಸಿ, ಪೈಪ್‌ ಕಟ್‌ ಮಾಡಿಸಿ ಹಣವನ್ನು ಹೊರಕ್ಕೆ ತೆಗೆದಿದ್ದಾರೆ.

  ಶಾಂತಗೌಡರ ಮನೆಯ ಬಾತ್ ರೂಂ ಮತ್ತು ವಾಶ್ ಬೇಸನ್ ಪೈಪ್ ನಲ್ಲಿ ದುಡ್ಡಿನ ಕಂತೆ ಹಾಕಿದ್ದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಾಂತಗೌಡ ಮತ್ತು ಆತನ ಪುತ್ರ ವಾಸವಿರುವ ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿ ಮನೆಯ ಪೈಪ್ ನಲ್ಲಿ ಹಣ ಪತ್ತೆಯಾಗಿದೆ.

Share Post