ರೆಪೋ ದರ ಹೆಚ್ಚಳ ಮಾಡಿದ ಆರ್‌ಬಿಐ; ಶೇ.6.5ಕ್ಕೆ ನಿಗದಿ
ಮುಂಬೈ; ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದೆ. 25ರಷ್ಟು ಮೂಲಾಂಶವನ್ನು ಹೆಚ್ಚಿಸಲಾಗಿದ್ದು, ಶೇಕಡಾ 6.5ಕ್ಕೆ ನಿಗದಿ ಮಾಡಲಾಗಿದೆ. ಕೇಂದ್ರ ಬಜೆಟ್‌ನ ಬಳಿಕ ಆರ್‌ಬಿಐ ಮೊದಲ ಹಣಕಾಸು ನೀತಿ ನಡೆಯಿತು.
ಇದರಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆರ್‌ಬಿಐ ಗವರ್ನರ್ ಶಕ್ತಿತಾಂತ ದಾಸ್ ರೆಪೊ ದರ ಹೆಚ್ಚಳವಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 2022ರ ಮೇ ತಿಂಗಳಿನಿಂದ ಈಚೆಗೆ ಆರ್‌ಬಿಐ ಆರನೇ ಸಲ ಬಡ್ಡಿ ದರವನ್ನು ಹೆಚ್ಚಿಸಿದೆ.