CinemaHealthNational

ಆಕ್ಸಿಜನ್‌ ಥೆರಪಿ ಪಡೆದ ನಟಿ ಸಮಂತಾ; ಏನಿದರ ವಿಶೇಷತೆ..?

ಮುಂಬೈ; ಸೌತ್‌ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ನಟಿ ಸಮಂತಾ, ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದ ಮೇಲೆ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ನಡುವೆ ಹಲವು ಸಿನಿಮಾಗಳನ್ನೂ ಮಾಡಿದ್ದಾರೆ. ಕೆಲ ತಿಂಗಳಿಂದ ಸಮಂತಾ ಅವರು ಒಂದಲ್ಲ ಒಂದು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಅದರಿಂದ ಹೊರಬರೋ ಪ್ರಯತ್ನ ಮಾಡ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಹೊಸದೊಂದು ಥೆರಪಿ ಮಾಡಿಸುತ್ತಿದ್ದಾರೆ.

ಸಮಂತಾ ಅವರು ಪಡೆಯುತ್ತಿರುವ ಥೆರಪಿ ಹೆಸ್ರು ಹೈಪರ್‌ಬ್ಯಾರಿಕ್ ಆಕ್ಸಿಜನ್ ಥೆರಪಿ. ಶಾರ್ಟ್‌ಫಾರ್ಮ್ನಲ್ಲಿ ಎಚ್‌ಬಿಓಟಿ ಅಂತ ಕರೀತಾರೆ. ಸಮಂತಾ ಅವರು ಕೆಲ ತಿಂಗಳಿಂದ ಮಯೋಸಿಟಿಸ್‌ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿ ಅವರು ಚರ್ಮದ ಸಮಸ್ಯೆ, ಶ್ವಾಸಕೋಶ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ, ಅವ್ರು ಸಂಪೂರ್ಣ ಗಣಮುಖರಾಗೋದಕ್ಕೆ ಆಕ್ಸಿಜನ್‌ ಥೆರಪಿ ಮಾಡಿಸ್ತಾ ಇದ್ದಾರೆ.

ಶುದ್ಧ ಆಮ್ಲಜನಕವನ್ನು ನಾವು ಉಸಿರಾಡುವುದಕ್ಕಿಂತ ಹೆಚ್ಚಿನ ವೇಗದಲ್ಲಿ ನನ್ನ ದೇಹಕ್ಕೆ ನೀಡಲಾಗುತ್ತದೆ. ಈ ಥೆರಪಿ ಮಾಡಿಸಲು ವಿಶೇಷವಾದ ಕೋಣೆಯನ್ನು ನಿರ್ಮಿಸಿ ಅಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಥೆರಪಿ ನೀಡುವುದರಿಂದ ನಮ್ಮ ಶ್ವಾಸಕೋಶಗಳು ಹೆಚ್ಚು ಆಮ್ಲಜನಕವನ್ನು ಹೀರಿಕೊಳ್ಳುತ್ತವೆ. ಜೊತೆಗೆ ರಕ್ತದಲ್ಲಿ ಕೂಡಾ ಆಮ್ಲಜನಕ ಪ್ರಮಾಣ ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

Share Post