National

ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ; ಪಂಚರಾಜ್ಯಗಳ ಗೆಲುವಿಗೆ ಸಂಭ್ರಮ

ಗಾಂಧಿನಗರ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಗುಜರಾತ್‌ನಲ್ಲಿ ಭರ್ಜರಿ ರೋಡ್‌ ಶೋ ನಡೆಸಿದ್ದಾರೆ. ಅಹಮಾದಾಬಾದ್‌ನಿಂದ ಗಾಂಧಿನಗರದ ವರೆಗೂ ರೋಡ್‌ ಶೋ ನಡೆಸಲಾಗುತ್ತದೆ.

ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತಿದೆ. ಜೊತೆಗೆ ಮೋದಿಯವರ ಗಮನ ಗುಜರಾತ್‌ ವಿಧಾನಸಭಾ ಚುನಾವಣೆ ಮೇಲೆ ನೆಟ್ಟಿದೆ. ಹೀಗಾಗಿ ಗುಜರಾತ್‌ನಲ್ಲಿ ಭರ್ಜರಿ ರೋಡ್‌ ಮೂಲಕ ಪಕ್ಷಕ್ಕೆ ಹುಮ್ಮಸ್ಸು ತುಂಬಿಸಿದ್ದಾರೆ. ರೋಡ್‌ ಶೋ ಬಳಿಕ ಪಂಚಾಯತ್ ಸಂಸ್ಥೆಗಳ 100,000 ಚುನಾಯಿತ ಪ್ರತಿನಿಧಿಗಳ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅನಂತರ ಮೋದಿಯವರು ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ‘ಖೇಲ್ ಮಹಾಕುಂಭ’ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಇದಲ್ಲದೆ ಗಾಂಧಿನಗರ ಬಿಜೆಪಿ ಕಚೇರಿಯಲ್ಲಿ ಪಕ್ಷದ ಶಾಸಕರು, ಸಂಸದರ ಸಭೆಯಲ್ಲಿ ಮಾತನಾಡಲಿದ್ದಾರೆ. ಹೀಗೆ, ಇಂದು ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಇದೇ ವರ್ಷದ ಕೊನೆಗೆ ಗುಜರಾತ್‌ ಚುನಾವಣೆ ಎದುರಾಗಲಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಮೋದಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ.

Share Post