ಎಟಿಎಂಗೆ ಹಣ ತುಂಬಿಸಬೇಕಿದ್ದ ವ್ಯಕ್ತಿ ಒಂದು ಕೋಟಿ ಹಣದೊಂದಿಗೆ ಪರಾರಿ
ಬೆಂಗಳೂರು: ಎಟಿಎಂಗೆ ಹಣ ತುಂಬಿಸಬೇಕಿದ್ದ ವ್ಯಕ್ತಿ ಒಂದು ಕೋಟಿ ಹಣದೊಂದಿಗೆ ಪರಾರಿಯಾದ ಘಟನೆ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜೇಶ್ ಮೇಸ್ತಾ ಎಂಬಾತ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ನಲ್ಲಿ ಕೆಲಸಮಾಡುತಿದ್ದ. ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಎಟಿಎಂಗಳಿಗೆ ಹಣ ತುಂಬಿಸುವ ಸಂಸ್ಥೆ. ಕಳೆದ 11 ವರ್ಷದಿಂದ ಮೆಸ್ತಾ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ.
ಆದರೆ ಜನವರಿ ಅಂತ್ಯದಲ್ಲಿ ಇದ್ದಕ್ಕಿದ್ದಂತೆ ಪೋನ್ ಸ್ವಿಚ್ಡ್ ಅಪ್ ಮಾಡಿ ಎಸ್ಕೇಪ್ ಆಗಿದ್ದಾನೆ. ಇದರಿಂದ ಅನುಮಾನಗೊಂಡು ಸಂಸ್ಥೆಯಿಂದ ಎಟಿಎಂಗಳ ಆಡಿಟ್ ಮಾಡಿದ್ದಾರೆ. ರಾಜೇಶ್ ಹಣ ತುಂಬಿಸುತ್ತಿದ್ದ ಎಟಿಎಂಗಳ ಆಡಿಟ್ ಮಾಡುವ ವೇಳೆ ಆತ 1ಕೋಟಿ 3ಲಕ್ಷ ಹಣದ ಸಮೇತ ಪರಾರಿಯಾಗಿರುವುದು ಪತ್ತೆಯಾಗಿದೆ. ಸದ್ಯ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಆರೋಪಿಗೆ ಹುಡುಕಾಟ ನಡೆಸಿದ್ದಾರೆ.