CinemaNational

ಚುಟು ಚುಟು ಬೆಡಗಿ ಟಾಲಿವುಡ್‌ಗೆ ಎಂಟ್ರಿ; ಕಲ್ಯಾಣ್‌ ರಾಮ್‌ಗೆ ನಾಯಕಿಯಾಗಿ ನಟನೆ

ಹೈದರಾಬಾದ್‌; ಕನ್ನಡದ ನಟಿ ಆಶಿಕಾ ರಂಗನಾಥ್‌ ಈಗ ಟಾಲಿವುಡ್‌ಗೆ ಕಾಲಿಟ್ಟಿದ್ದಾರೆ. ನಂದಮೂರು ಕಲ್ಯಾಣ್‌ ರಾಮ್‌ ಅವರ ಸಿನಿಮಾದಲ್ಲಿ ಆಶಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಶಿಕಾರನ್ನು ಜ್ಯೂ.ಎನ್‌ಟಿಆರ್‌ ಹೊಗಳಿದ್ದು, ಟಾಲಿವುಡ್‌ಗೆ ಸ್ವಾಗತ ಕೋರಿದ್ದಾರೆ.

ಆಶಿಕಾ ರಂಗನಾಥ್‌ ರ್ಯಾಂಬೋ ೨, ಮದಗಜ ಮುಂತಾದ ಸಿನಿಮಾಗಳ ಮೂಲಕ ಕನ್ನಡದಲ್ಲಿ ಹೆಸರು ಮಾಡಿದ್ದಾರೆ. ಇದೀಗ ಅವರು ಪರಭಾಷೆಗೆ ಹಾರಿದ್ದಾರೆ. ತೆಲುಗಿನ ಕಲ್ಯಾಣ್ ರಾಮ್ ನಟನೆಯ `ಅಮಿಗೋಸ್’ ಚಿತ್ರದ ಮೂಲಕ ತೆಗುಲು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಮಿಗೋಸ್ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಖ್ಯಾತ ನಟ ಜ್ಯೂ.ಎನ್‌ಟಿಆರ್‌ ಆಗಮಿಸಿದ್ದರು. ಈ ವೇಳೆ ಅವರು ಆಶಿಕಾ ರಂಗನಾಥ್‌ ಪರವಾಗಿ ಒಂದಷ್ಟು ಒಳ್ಳೆಯ ಮಾತುಗಳನ್ನಾಡಿದ್ದಾರೆ.

Share Post