National

ಕಾವೇರಿ ಸೇರಿ 15 ನದಿಗಳ ನೀರು ನೇರ ಕುಡಿಯಲು ಯೋಗ್ಯವಲ್ಲ; ವರದಿ

ಬೆಂಗಳೂರು; ಕಾವೇರಿ ಸೇರಿ ರಾಜ್ಯದ ಹದಿನೈದು ನದಿಗಳು ಕಲುಷಿತವಾಗಿವೆ. ಇದರಿಂದಾಗಿ ಆ ನದಿಗಳ ನೀರು ನೇರವಾಗಿ ಕುಡಿಯವುದಕ್ಕೆ ಯೋಗ್ಯವಲ್ಲವಂತೆ. ಹೀಗಂತ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ವರದಿ ಹೇಳಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನದಿಗಳ ಹರಿವಿನಲ್ಲಿ ನೀರನ್ನ ಸಂಗ್ರಹಿಸಿ ಪರೀಕ್ಷೆಗೆ ಮಾಡಿಸಿದೆ. ಈ ವರದಿಯಲ್ಲಿ 15 ನದಿಗಳ ನೀರು ನೇರವಾಗಿ ಕುಡಿಯೋಕೆ ಯೋಗ್ಯವಲ್ಲ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕಾವೇರಿ, ಕಬಿನಿ, ಕಾಳಿ, ಕೃಷ್ಣ, ನೇತ್ರಾವತಿ, ಶಿಂಷಾ, ಅರ್ಕಾವತಿ, ಲಕ್ಷ್ಮಣ ತೀರ್ಥ, ಮಲಪ್ರಭಾ, ತುಂಗಭದ್ರಾ, ಕಗಿನಿ, ಕಾಳಿ, ಕೃಷ್ಣ, ಅಸಂಗಿ ಕೃಷ್ಣ, ಭೀಮಾ, ಕುಮಾರಧಾರ, ತುಂಗಾ, ಯಗಚಿ ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಮಹಾನಗರಗಳು ಹಾಗೂ ನಗರಗಳಲ್ಲಿನ ಕಂಪನಿಗಳು, ಕಾರ್ಖಾನೆಗಳು ಹೊರಸೂಸುವ ಕೆಮಿಕಲ್ ಹಾಗೂ ತ್ಯಾಜ್ಯದಿಂದಲೇ ನೀರು ಕಲುಷಿತ ಆಗ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Share Post