National

ದೆಹಲಿಯಲ್ಲಿ ಕನಿಷ್ಠಕ್ಕಿಳಿದ ತಾಪಮಾನ; ಚಳಿಗೆ ರಾಜಧಾನಿ ಜನರು ತತ್ತರ

ನವದೆಹಲಿ; ರಾಷ್ಟ್ರ ರಾಜಧಾನಿ ಜನ ವಿಪರೀತ ಚಳಿಗೆ ತತ್ತರಿಸುತ್ತಿದ್ದಾರೆ. ಮೈಕೊರೆಯುವ ಚಳಿಗೆ ಜನ ಮನೆಯಿಂದ ಹೊರಗೆ ಬರೋದಕ್ಕೂ ಸಾಧ್ಯವಾಗದ ಪರಿಸ್ಥಿತಿ ಇದೆ. ಸೋಮವಾರ ಬೆಳಗಿನ ಜಾವ ದೆಹಲಿಯಲ್ಲಿ 1.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಅದಕ್ಕಿಂತ ಕಡಿಮೆ ತಾಪಮಾನಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮುಂದಿನ ಆರು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಾಡಿಕೆಗಿಂತ 2–3 ಡಿಗ್ರಿಯಷ್ಟು ತಾಪಮಾನ ಕುಸಿದಿದ್ದು, ಬೆಳಗ್ಗೆ 11 ಗಂಟೆಯಾದರೂ ದಟ್ಟ ಮಂಜು ಆವರಿಸಿತ್ತು. ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಬುಧವಾರದವರೆಗೆ ತೀವ್ರ ಶೀತ ಗಾಳಿಯು ಮುಂದುವರಿಯಲಿದೆ ಎಂದು ಹಮಾವಾನ ಇಲಾಖೆ ಹೇಳಿದೆ.

Share Post