ಈ ಬಾರಿಯ ಚುನಾವಣೆಯಲ್ಲಿ ಸಿಡಿಗಳು ನಿರ್ಣಾಯಕವಾಗುತ್ತವಾ..?
ಬೆಂಗಳೂರು; ಚುನಾವಣೆಯಲ್ಲಿ ಅಭಿವೃದ್ಧಿ, ಹಣ, ಜಾತಿ ಮುಂತಾದ ವಿಚಾರಗಳು ಅಭ್ಯರ್ಥಿಗಳ ಗೆಲುವನ್ನು ನಿರ್ಧಾರ ಮಾಡುತ್ತವೆ.. ಇನ್ನು ಎಲ್ಲಾ ಪಕ್ಷಗಳ ಅಭಿವೃದ್ಧಿಯ ಪ್ರಣಾಳಿಕೆಯನ್ನು ರಚಿಸಿಕೊಂಡು ಜನರ ಮುಂದೆ ಹೋಗುತ್ತವೆ.. ಆದ್ರೆ ಈ ಬಾರಿಯ ಚುನಾವಣೆ ಬೇರೆಯದೇ ರೀತಿಯಲ್ಲಿ ನಡೆಯೋ ಎಲ್ಲಾ ಲಕ್ಷಣಗಳೂ ಇವೆ.. ಹಣ, ಜಾತಿ, ಅಭಿವೃದ್ಧಿ ಈ ಎಲ್ಲಕ್ಕಿಂತ ಮಿಗಿಲಾಗಿ ಈ ಬಾರಿಯ ಚುನಾವಣೆಯಲ್ಲಿ ಸಿಡಿಗಳು ಆಟ ಆಡಲಿವೆ.. ಸಂಕ್ರಾಂತಿ ನಂತರ ಸಿಡಿ ಕ್ರಾಂತಿ ನಡೆಯುವ ಎಲ್ಲಾ ಲಕ್ಷಣಗಳೂ ಇವೆ ಎನ್ನಲಾಗುತ್ತಿದೆ.. ಸ್ಯಾಂಟ್ರೋ ರವಿ ಪ್ರಕರಣ ಇದಕ್ಕೆ ಮುನ್ನುಡಿ ಅಂತಾನೇ ಹೇಳಬಹುದು…
ಸ್ಯಾಂಟ್ರೋ ರವಿ ವಿರುದ್ಧ ಆತನ ಎರಡನೇ ಪ್ರತ್ನಿ ದೂರು ಕೊಟ್ಟ ನಂತರ, ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ… ಸಿಎಂ ಬೊಮ್ಮಾಯಿಗೂ ಸ್ಯಾಂಟ್ರೋ ರವಿಗೂ ಇರುವ ನಂಟೇನು ಎಂದು ವಿಪಕ್ಷಗಳು ಪ್ರಶ್ನೆ ಮಾಡುತ್ತಿವೆ.. ಇನ್ನೊಂದೆಡೆ, ಆಪರೇಷನ್ ಕಮಲದ ಸಮಯದಲ್ಲಿ ಮುಂಬೈಗೆ ಹೋಗಿದ್ದ ಶಾಸಕರ ಜೊತೆ ಸ್ಯಾಂಟ್ರೋ ರವಿ, ಹುಡುಗಿಯರನ್ನು ಕಳುಹಿಸಿದ್ದ ಎಂಬ ಹೇಳಿಕೆಗಳು ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ… ಆದ್ರೆ ಇದು ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ… ಆದ್ರೆ, ಹಲವು ಪ್ರಮುಖ ರಾಜಕಾರಣಿಗಳ ಸಿಡಿಗಳು ಇರೋದು ನಿಜ ಅನ್ನೋ ಅನುಮಾನಗಳು ಬಲವಾಗಿವೆ.. ಆ ಸಿಡಿಗಳು ಚುನಾವಣೆ ಸಮೀಪವಾಗುತ್ತಿರುವ ಇಂತಹ ಸಮಯದಲ್ಲಿ ಒಂದೊಂದೇ ಹೊರಬರಲಿವೆ ಎಂದು ಹೇಳಲಾಗುತ್ತಿದೆ…
ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ ಮೇಲೆ ಮುಂಬೈಗೆ ಹೋಗಿದ್ದವರಲ್ಲಿ ಹಲವರು ಕೋರ್ಟ್‌ಗೆ ಹೋಗಿ ಇಂಜೆಕ್ಷನ್ ಆರ್ಡರ್ ತಂದಿದ್ದರು… ಇದಕ್ಕೆ ಕಾರಣ ಹಲವರ ಸಿಡಿಗಳು ಬಿಡುಗಡೆಯಾಗುತ್ತವೆ ಎಂಬ ಗುಲ್ಲೆದ್ದಿದ್ದು… ನಮ್ಮನ್ನ ತೇಜೋವಧೆ ಮಾಡಲು ಕೆಲವರು ಯತ್ನಿಸುತ್ತಿದ್ದಾರೆ.. ಹೀಗಾಗಿ, ನಮ್ಮ ವಿರುದ್ಧ ಯಾವುದೇ ಸಿಡಿ ಬಿಡುಗಡೆ ಮಾಡಲು ಅವಕಾಶ ನೀಡಬಾರದು ಎಂದು ಹಲವು ನಾಯಕರು ಇಂಜೆಂಕ್ಷನ್ ಆರ್ಡರ್ ತಂದಿದ್ದರು… ಆಗ ಸಿಡಿ ಸದ್ದು ಕಡಿಮೆಯಾಗಿತ್ತು.. ಆದ್ರೆ ಈಗ ಚುನಾವಣೆ ಹತ್ತರಕ್ಕೆ ಬಂದಿದೆ.. ಇದೇ ವೇಳೆ ಸ್ಯಾಂಟ್ರೋ ರವಿ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ.. ಸ್ಯಾಂಟ್ರೋ ಹಿರಿಯ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳಿಗೆ ಹುಡುಗಿಯರನ್ನು ಸಪ್ಲೈ ಮಾಡುತ್ತಿದ್ದ ಅನ್ನೋ ಆರೋಪಗಳಿವೆ… ಹೀಗಾಗಿ, ಸಿಡಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ…
ಹಲವಾರು ರಾಜಕಾರಣಿಗಳು ಸಿಡಿಗಳನ್ನಿಟ್ಟುಕೊಂಡು ಹಲವು ಹಿರಿಯ ನಾಯಕರಿಗೆ ಬ್ಲ್ಯಾಕ್ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಸಿಡಿ ತೋರಿಸಿಯೇ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಗಿಟ್ಟಿಸಿಕೊಂಡಿದ್ದಾರೆ ಎಂಬ ಗುಸುಗುಸು ಮಾತುಗಳು ಮೊದಲಿನಿಂದಲೂ ಇವೆ… ಈ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆ ಬರೀ ಸಿಡಿ ಮಯ ಆಗೋ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ.. ಇಲ್ಲಿ ಇಂತಹ ಪಕ್ಷ ಎನ್ನದೇ ಎಲ್ಲಾ ಪಕ್ಷದವರ ಸಿಡಿಗಳೂ ಹೊರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.. ಯಾರ ಸಿಡಿ ಹೊರಬರುತ್ತದೋ ಅವರ ಸೋಲು ಪಕ್ಕಾ ಎಂದು ಹೇಳಲಾಗುತ್ತಿದೆ.. ಹೀಗಾಗಿಯೇ ಹಲವು ನಾಯಕರಿಗೆ ಸಿಡಿ ಭೀತಿ ಎದುರಾಗಿದೆ… ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರೂ, ಸಿಡಿ ಬಿಡುಗಡೆಯಾದರೆ ನಮ್ಮ ಇಮೇಜ್ ಹಾಳಾಗಿ ಸೋಲಲು ಕಾರಣವಾಗಬಹುದು ಎಂಬ ಭೀತಿ ಕೆಲವರಲ್ಲಿದೆ ಎಂದು ಹೇಳಲಾಗುತ್ತಿದೆ..
ಇತ್ತೀಚೆಗೆ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ಸಿಡಿಗಳ ವಿಚಾರ ಎತ್ತಿದ್ದರು.. ಬಸನಗೌಡ ಯತ್ನಾಳ್ ಅವರು ಆಗಾಗ ಸಿಡಿಗಳು ಇರುವ ಬಗ್ಗೆ ಹೇಳುತ್ತಲೇ ಬಂದಿದ್ದರು… ಕೆಲವು ಮಾಧ್ಯಮಗಳ ಬಳಿಯೂ ಹಲವು ನಾಯಕರ ಸಿಡಿಗಳು ಇವೆ ಎಂದು ಹೇಳಲಾಗುತ್ತಿದೆ.. ಅವು ಚುನಾವಣೆ ಸಮಯದಲ್ಲಿ ಬಿಡುಗಡೆಯಾದರೂ ಅಚ್ಚರಿ ಇಲ್ಲ…
ಸದ್ಯಕ್ಕೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಚುನಾವಣೆ ಗೆಲ್ಲಲು ನಾನಾ ತಂತ್ರಗಳನ್ನು ಮಾಡುತ್ತಿವೆ.. ಆದ್ರೆ ಯಾವುದಾದರೂ ಒಂದು ಸಿಡಿ ಬಿಡುಗಡೆಯಾದರೂ ರಾಜ್ಯ ರಾಜಕೀಯ ಚಿತ್ರಣ ಬದಲಾಗಿಬಿಡುತ್ತದೆ.. ಹಾಗೇನಾದರೂ ಸಿಡಿ ಬಿಡುಗಡೆ ಶುರುವಾದರೆ, ಮೂರು ಪಕ್ಷಗಳಲ್ಲಿ ಕೆಲವರಿಗೆ ಭೀತಿ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ… ಸಿಡಿಗಳು ರಾಜಕೀಯ ಚಿತ್ರಣವನ್ನೇ ಬದಲಿಸಿ, ಗೆಲುವಿನ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವ ತಾಕತ್ತು ಸಿಡಿಗಳಿಗಿವೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಿಂದ ಕೇಳಿಬರುತ್ತಿವೆ..