ನಾಳೆಯಿಂದ ನಂದಿನಿ ಹಾಲಿನ ದರ 2 ರೂ. ಹೆಚ್ಚಳ; ಗ್ರಾಹಕರಿಗೆ ಬರೆ
ಬೆಂಗಳೂರು; ಮೊನ್ನೆಯಷ್ಟೇ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದ್ದ ರಾಜ್ಯ ಸರ್ಕಾರ ಈಗ ಹಾಲಿನ ಬೆಲೆ ಏರಿಕೆ ಮಾಡಿದೆ.. KMF ಅಧ್ಯಕ್ಷ ಈ ಬಗ್ಗೆ ಮಾಹಿತಿ ನೀಡಿದ್ದಾರೆ..
ಈ ಬಗ್ಗೆ ಸುದ್ದಿ ಘೋಷ್ಟಿಯಲ್ಲಿ ಮಾತನಾಡಿದ ಅವರು ಸದ್ಯ ಲೀಟರ್ ಹಾಲಿನ ಬೆಲೆ 42 ರೂಪಾಯಿ ಇದ್ದು, ಈಗ ಅದನ್ನು 44 ರುಪಾಯಿಗೆ ಏರಿಸಲಾಗಿದೆ ಎಂದು ಹೇಳಿದರು. ಲೀಟರ್ ಹಾಲಿನ ಪ್ಯಾಕೆಟ್ ಗೆ 50ML ಹಾಲು ಹೆಚ್ಚುವರಿಯಾಗಿ ಸೇರೋಸುತ್ತಿದ್ದೇವೆ ಎಂದು ಅವರು ಹೇಳಿದರು..
ನಾಳೆಯಿಂದಲೇ ಈ ದರ ಅನ್ವಯವಾಗಲಿದೆ.. ಹಾಲು ಬಿಟ್ಟು ಮಿಕ್ಕೆಲ್ಲ ಉತ್ಪನ್ನಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ..