BengaluruCrimeUncategorized

ಹನಿಟ್ರ್ಯಾಪ್‌ಗೆ ಬಿದ್ದು ಕೆಲಸ ಕಳೆದುಕೊಂಡ ಟೆಕ್ಕಿ; ಪತ್ನಿಯೂ ದೂರವಾಗಿ ಪಡಿಪಾಟಲು

ಬೆಂಗಳೂರು; ಹನಿಟ್ರ್ಯಾಪ್‌ಗೆ ಬಿದ್ದು ಟೆಕ್ಕಿಯೊಬ್ಬ ಕೆಲಸ ಕಳೆದುಕೊಂಡಿದ್ದಲ್ಲದೆ, ಪತ್ನಿಯೂ ದೂರವಾಗಿ ದಿಕ್ಕುತೋಚದಂತಾಗಿದ್ದಾರೆ. ತಿಂಗಳಿಗೆ ಮೂರು ಲಕ್ಷ ಸಂಬಳ ಪಡೆಯುತ್ತಿದ್ದ ಟೆಕ್ಕಿಯೊಬ್ಬ ಹೆಂಡತಿ, ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದರು. ಆದ್ರೆ, ಸ್ನೇಹಿತನ ಮೂಲಕ ಪರಿಚಯವಾದ ಮಾಯಾಂಗನೆಯೊಬ್ಬಳು ಆತನ ಬದುಕನ್ನೇ ಹಾಳು ಮಾಡಿದ್ದಾಳೆ.

ಮೊದಲಿಗೆ ಕಷ್ಟ ಇದೆ ಎಂದು ಹಣ ಪಡೆದುಕೊಳ್ಳುತ್ತಿದ್ದ ಆಕೆ, ನಂತರ ಟೆಕ್ಕಿ ಜೊತೆ ಸೆಲ್ಫಿ ವಿಡಿಯೋ ತೆಗೆದುಕೊಂಡು ಬ್ಲ್ಯಾಕ್‌ ಮೇಲೆ ಮಾಡಲು ಶುರು ಮಾಡಿದ್ದಾಳೆ. ಹಣ ಕೊಡದೇ ಇದ್ದುದಕ್ಕೆ ಟೆಕ್ಕಿ ಕೆಲಸ ಮಾಡುವ ಕಂಪನಿಗೆ ಇ ಮೇಲ್‌ ಮಾಡಿ ವಿಡಿಯೋಗಳನ್ನು ಕಳುಹಿಸಿದ್ದಾಳೆ. ಇದ್ರಿಂದಾಗಿ ಕಂಪನಿ ಟೆಕ್ಕಿಯನ್ನು ಕೆಲಸದಿಂದ ವಜಾ ಮಾಡಿದೆ. ಅನಂತರ ಆಕೆ ಟೆಕ್ಕಿಯ ಪತ್ನಿಗೂ ಫೋಟೋ, ವಿಡಿಯೋಗಳನ್ನು ರವಾನಿಸಿದ್ದಾಳೆ. ಇದ್ರಿಂದ ಪತ್ನಿ ಕೂಡಾ ಬಿಟ್ಟು ಹೋಗಿದ್ದಾಳೆ. ಇದ್ರಿಂದ ಬೇಸತ್ತ ಟೆಕ್ಕಿ ಇದೀಗ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ನನ್ನ ಜೀವನ ಹಾಳಾಗಿದೆ. ಉಳಿದವರ ಜೀವನ ಹಾಳಾಗಬಾರದು. ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಟೆಕ್ಕಿ ಮನವಿ ಮಾಡುತ್ತಿದ್ದಾರೆ.

Share Post