ನಟಿ ವೈಷ್ಣವಿ ಎಂಗೇಜ್ಮೆಂಟ್ ವಿಚಾರಕ್ಕೆ ಹೊಸ ತಿರುವು
ಬೆಂಗಳೂರು; ನಟಿ ವೈಷ್ಣವಿ ಎಂಗೇಜ್ ಮೆಂಟ್ ಆಗಿದೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಆದ್ರೆ ಅದಕ್ಕೆ ಸಮಜಾಯಿಷಿ ಕೊಟ್ಟಿದ್ದ ವೈಷ್ಣವಿ, ಎಂಗೇಜ್ ಮೆಂಟ್ ಆಗಿಲ್ಲ. ನೋಡೋಕೆ ಬಂದಿದ್ದರು ಅಷ್ಟೇ. ನಾನಿನ್ನೂ ಒಪ್ಪಿಗೆ ಕೊಟ್ಟಿಲ್ಲ ಎಂದು ಹೇಳಿದ್ದರು. ಇದೀಗ ಈ ವಿಚಾರ ಮತ್ತೊಂದು ತಿರುವು ಪಡೆದುಕೊಂಡಿದೆ.
ವೈಷ್ಣವಿ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾದ ವಿದ್ಯಾಭರಣ್ ವಿರುದ್ದ ಯುವತಿಯೊಬ್ಬಳು ಆಡಿಯೋ ಹರಿಬಿಟ್ಟಿದ್ದಾಳೆ. ನನಗೆ ವಿದ್ಯಾಭರಣ್ ಮೋಸ ಮಾಡಿದ್ದಾಳೆ ಎಂದು ಹೇಳಿಕೊಂಡಿದ್ದಾಳೆ.
ಇದಾದ ಮೇಲೆ ವಿದ್ಯಾಭರಣ್ ಇದೆಲ್ಲಾ ಸುಳ್ಳು. ಕೇಸ್ ದಾಖಲಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ವೈಷ್ಣವಿ ಈ ವಿಚಾರ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು ಎಂದು ಸಮಜಾಯಿಷಿ ನೀಡಿದ್ದಾರೆ.