Cinema

ತೆರೆಗೆ ಬಂದೇ ಬಿಡ್ತು ಬಹು ನಿರೀಕ್ಷಿತ ಆರ್‌ಆರ್‌ಆರ್‌ ಸಿನಿಮಾ: ಹೇಗಿದೆ ಮೋಡಿ..?

ಹೈದರಾಬಾದ್:‌  ನಾಲ್ಕು ವರ್ಷಗಳ ಸತತ ಪರಿಶ್ರಮ…ಪ್ರೇಕ್ಷಕರ ಬಹುನಿರೀಕ್ಷಿತ ಸಿನಿಮಾ, ಮಲ್ಟಿಸಾರರ್‌ ಮಾಸ್‌ ಆಕ್ಷನ್‌ ಸಿನಿಮಾ RRRಇಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದೆ. ಬಾಹುಬಲಿ ಚಿತ್ರದ ಮೂಲಕ ಟಾಲಿವುಡ್ ಸ್ಟಾಮಿನಾವನ್ನು ನೇಷನ್ ವೈಡ್ ಆಗಿ ಪರಿಚಯಿಸಿದ ರಾಜಮೌಳಿ ಇದೀಗ ಟ್ರಿಪಲ್ ಆರ್ ಅನ್ನು ಭಾರತೀಯ ಚಿತ್ರದ ಹೆಮ್ಮೆಯನ್ನಾಗಿ ಮಾಡಲು ನಿರ್ಧರಿಸಿದ್ದಾರೆ. ಟ್ರಿಪಲ್‌ಆರ್ ಅನ್ನು ಅದ್ಧೂರಿಯಾಗಿ ಪ್ರದರ್ಶನ ಮಾಡಲಾಯಿತು.  500 ಕೋಟಿ ಬಜೆಟ್ .. ವಾಸ್ತವವಾಗಿ, ಭಾರತದ ಇತಿಹಾಸದಲ್ಲಿ ಇಷ್ಟು ಬಜೆಟ್‌ನಲ್ಲಿ ಯಾವ ಚಿತ್ರವೂ ತೆರೆಕಂಡಿಲ್ಲ. ತೆಲುಗು ನಿರ್ದೇಶಕ ತನ್ನ ಬಿಗ್ ಡ್ರೀಮ್ ಅನ್ನು ವರ್ಲ್ಡ್ ವೈಡ್ ಕ್ಯಾನ್ವಾಸ್ ನಲ್ಲಿ ಟ್ರಿಪಲ್ ಆರ್ ಆಗಿ ತೋರಿಸಲು ಹೊರಟಿದ್ದಾರೆ. ಬರೀ ಮೇಕಿಂಗ್ ಗೆ 350 ಕೋಟಿ ಖರ್ಚು ಮಾಡಿದ್ದು.. ಸಿನಿಮಾ ಯಾವ ರೇಂಜ್ ನಲ್ಲಿ ಮೂಡಿದೆ ಎಂಬುದನ್ನು ಊಹೆ ಮಾಡಿಕೊಳ್ಳಬಹುದು.

3,000 ಕ್ಕೂ ಹೆಚ್ಚು ತಂತ್ರಜ್ಞರು, 10 ಸಹ-ನಿರ್ದೇಶಕರು ಸೇರಿದಂತೆ ಸಾವಿರಾರು ಜನ ಈ ಸಿನಿಮಾಗಾಗಿ ತಮ್ಮ ದುಡಿದಿದ್ದಾರೆ.  ಟ್ರಿಪಲ್ ಆರ್ ಈಗಾಗಲೇ 450 ಕೋಟಿ ರೂಪಾಯಿ ಪ್ರಿ-ರಿಲೀಸ್‌ಗೆ ಖರ್ಚು ಮಾಡಿದೆ.ವಿಶ್ವಾದ್ಯಂತ 11,000 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ತೆಲುಗು ಚಿತ್ರವಾಗಿ ಟ್ರಿಪಲ್ ಆರ್ ದಾಖಲೆ ಬರೆಯುತ್ತಿದೆ. ಈ ಬಿಗ್ ಬಜೆಟ್ ಸಿನಿಮಾ ಅಮೆರಿಕ ಒಂದರಲ್ಲೇ 1150 ಲೊಕೇಶನ್ ಗಳಲ್ಲಿ 2500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಟ್ರಿಪಲ್ ಆರ್ ಯುಕೆಯಲ್ಲಿ 1, 100 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗುತ್ತಿದೆ.ಆಸ್ಟ್ರೇಲಿಯಾ, ದುಬೈ, ಸಿಂಗಾಪುರ, ಥೈಲ್ಯಾಂಡ್ ಮತ್ತು ಜಪಾನ್ ಸೇರಿದಂತೆ 2,000 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಉತ್ತರದಲ್ಲಿ 3,000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಟ್ರಿಪಲ್ ಆರ್ ವಿಶ್ವಾದ್ಯಂತ ಒಂದೇ ದಿನದಲ್ಲಿ 75,000 ರಿಂದ 80,000 ಶೋಗಳನ್ನು ದಾಖಲಿಸುವ ಮೂಲಕ ದಾಖಲೆಯನ್ನು ಸೃಷ್ಟಿಸಲಿದೆ. ಹೆಚ್ಚಿದ ಟಿಕೆಟ್ ದರದಿಂದ ದಿನಕ್ಕೆ 40 ಕೋಟಿ ಹೆಚ್ಚುವರಿ ಕಲೆಕ್ಷನ್ ಆಗಲಿದೆ.  ಆ ಮೂಲಕ RRR ಮೊದಲ ದಿನವೇ 150 ರಿಂದ 170 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಲು ರೆಡಿಯಾಗಿದೆ. ರಾಜಮೌಳಿ ಅವರು ಟ್ರಿಪಲ್‌ಆರ್ ಅನ್ನು ಇಂಡಿಯನ್ ಪ್ರೈಡ್ ಚಲನಚಿತ್ರವಾಗಿ ಪ್ರೇಕ್ಷಕರಿಗೆ ಮುಂದಿರಿಸಿದ್ದಾರೆ.

ಇನ್ನು ಬೆಳ್ಳಂಬೆಳಗ್ಗೆಯೇ ಸಿನಿಮಾ ಥಿಯೇಟರ್‌ಗಳಲ್ಲಿ ಜನಜಾತ್ರೆಯೇ ನರೆದಿದೆ. ಎಲ್ಲಾ ಬಿಗ್‌ ಸ್ಕ್ರೀನ್‌ಗಳಲ್ಲಿ ತಮ್ಮ ನೆಚ್ಚಿನ ನಾಯಕ ನಟರನ್ನು ಕಂಡು ಅಭಿಮಾನಿಗಳು ಕೇಕೆ ಹಾಕುತ್ತಿದ್ದಾರೆ. ದೊಡ್ಡ ದೊಡ್ಡ ಕಟೌಟ್‌ಗಳು, ಸಿನಿಮಾ ಬಗ್ಗೆ ಪ್ರೇಕ್ಷಕರ ಬಾಯಲ್ಲಿ ಮಾತೇ ಬರುತ್ತಿಲ್ಲ. ಈ ಚಿತ್ರದ ಬಗ್ಗೆ ವರ್ಣಿಸಲು ಅಸಾಧ್ಯ ಅಂತಿದಾರೆ ಅಭಿಮಾನಿಗಳು. ದಿ ಸ್ಟಾರ್‌ ಡೈರೆಕ್ಟರ್‌ ನಿರೀಕ್ಷೆ ಹುಸಿಯಾಗಲಿಲ್ಲ. ಯಾವೊಬ್ಬ ಅಭಿಮಾನಿಯೂ ಸಿನಿಮಾ ಬಗ್ಗೆ ನೆಗೆಟಿವ್‌ ಕಮೆಂಟ್‌ ಮಾಡಿಲ್ಲ. ಅದ್ದೂರಿ ಸಿನಿಮಾ ಎಂದೇ ಬಣ್ಣಿಸುತ್ತಿದ್ದಾರೆ.

Share Post