ಕಾರಿನಲ್ಲಿ ಮಗುವಿನ ಶವ ಪತ್ತೆ; ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡರಾ ತಂದೆ..?
ಕೋಲಾರ; ಕೋಲಾರದ ಬಳಿಯ ಕೆಂದಟ್ಟಿ ಕೆರೆ ದಡದಲ್ಲಿ ಕಾರೊಂದು ಪತ್ತೆಯಾಗಿದ್ದು, ಅದ್ರಲ್ಲಿ ಎರಡು ವರ್ಷ ಮಗುವಿನ ಮೃತದೇಹ ಪತ್ತೆಯಾಗಿದೆ. ಮಗುವಿನ ತಂದೆ ನಾಪತ್ತೆಯಾಗಿದ್ದು ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಬೆಂಗಳೂರಿನ ಬಾಗಲೂರಿನ ನಿವಾಸಿ ರಾಹುಲ್ ಮಗುವಿನೊಂದಿಗೆ ನಾಪತ್ತೆಯಾಗಿದ್ದರು. ಇದೀಗ ಅವರು ತೆಗೆದುಕೊಂಡು ಹೋಗಿದ್ದ ಕಾರು ಕೋಲಾರದ ಬಳಿ ಪತ್ತೆಯಾಗಿದೆ. ಕರೆದಂಡೆಯಲ್ಲಿ ಕಾರು ಪತ್ತೆಯಾಗಿದ್ದು, ಮಗು ಜಿಯಾ ಕಾರಿನಲ್ಲಿ ಸಾವನ್ನಪ್ಪಿದೆ. ಮಗುವನ್ನು ಕೊಲೆ ಮಾಡಿ ರಾಹುಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ರಾಹುಲ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.