CinemaHealth

ಟಾಲಿವುಡ್‌ ಹಿರಿಯ ನಟ, ಮಹೇಶ್‌ ಬಾಬು ತಂದೆ ಕೃಷ್ಣಗೆ ತೀವ್ರ ಹೃದಯಾಘಾತ

ಹೈದರಾಬಾದ್‌; ತೆಲುಗಿನ ಖ್ಯಾತ ನಟ ಮಹೇಶ್‌ ಬಾಬು ಅವರ ತಂದೆ ಹಾಗೂ ಹಿರಿಯ ಟಾಲಿವುಡ್‌ ನಟ ಸೂಪರ್‌ ಸ್ಟಾರ್‌ ಕೃಷ್ಣಗೆ ತೀವ್ರ ಹೈದಯಾಘಾತವಾಗಿದೆ. ಕಳೆದ ರಾತ್ರಿ ಈ ಘಟನೆ ನಡೆದಿದ್ದು, ವಾರಿಗೆ ಹೈದರಾಬಾದ್‌ನ ಕಾಂಟಿನೆಂಟಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ವೈದ್ಯರು “ಭಾನುವಾರ ರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕೃಷ್ಣ ಅವರನ್ನು ನಮ್ಮ ಆಸ್ಪತ್ರೆಗೆ ಕರೆತರಲಾಯಿತು. ಅವರಿಗೆ ಹೃದಯ ಸ್ತಂಭನವಾಗಿತ್ತು. ಸಿಪಿಆರ್ ಮಾಡಿದ 20 ನಿಮಿಷಗಳಲ್ಲಿ ನಾವು ಅವರನ್ನು ಹೃದಯ ಸ್ತಂಭನದಿಂದ ಹೊರ ತಂದಿದ್ದೇವೆ. ಪ್ರಸ್ತುತ ಅವರು ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದಿದ್ದಾರೆ.

ಎಲ್ಲ ತಜ್ಞ ವೈದ್ಯರು ಕೃಷ್ಣ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ. ನಮ್ಮಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನೂ ಮಾಡುತ್ತಿದ್ದೇವೆ.  ಈಗಲೇ ಏನೂ ಹೇಳೋದಕ್ಕೆ ಆಗೋದಿಲ್ಲ. 24 ಗಂಟೆಗಳ ನಂತರ ಅವರ ಆರೋಗ್ಯದ ಬಗ್ಗೆ ಮತ್ತೊಂದು ಮಾಹಿತಿ ನೀಡುತ್ತೇವೆ ಎಂದು ವೈದ್ಯರು ತಿಳಿಸಿದ್ದಾರೆ.

 

 

Share Post