ಪತಿಯ ಹುಟ್ಟುಹಬ್ಬದ ಫ್ಲೆಕ್ಸ್ ಹರಿದು ಮಹಿಳೆ ಆಕ್ರೋಶ
ಬೀದರ್; ಪತಿ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ, ಮಹಿಳೆಯೊಬ್ಬರು ತನ್ನ ಪತಿಯ ಹುಟ್ಟುಹಬ್ಬದ ಫ್ಲೆಕ್ಸ್ ಹರಿದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೀದರ್ನ ಮೈಲೂರು ಕ್ರಾಸ್ನಲ್ಲಿ ನಡೆದಿದೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡ ಮಲ್ಲೇಶ್ ಅವರ ಫ್ಲೆಕ್ಸ್ಗಳನ್ನು ಅಳವಡಿಸಲಾಗಿತ್ತು. ಇದನ್ನು ನೋಡಿದ ಅವರ ಪತ್ನಿ ಸಾಧನಾ ಆ ಫ್ಲೆಕ್ಸ್ಗಳನ್ನು ಹರಿದು ಆಕ್ರೋಶ ಹೊರಹಾಕಿದ್ದಾರೆ.
ನಾಲ್ಕು ತಿಂಗಳ ಹಿಂದೆ ಪತಿ ಮಲ್ಲೇಶ್ರ ಅನೈತಿಕ ಸಂಬಂಧದ ಬಗ್ಗೆ ಸಾಧನಾ ದೂರು ನೀಡಿದ್ದರಂತೆ. ಆದ್ರೆ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎಂದು ಸಾಧನಾ ಆರೋಪ ಮಾಡಿದ್ದಾರೆ. ಇದ್ರಿಂದ ಆಕ್ರೋಶಗೊಂಡು ಸಾಧನಾ ಅವರು ಪತಿಯ ಫ್ಲೆಕ್ಸ್ಗಳನ್ನು ಹರಿದು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಸಾಧನಾ ನಡುವೆ ಮಾತಿನ ಚಕಮಕಿ ನಡೆದಿದೆ.