Bengaluru

ಮೆಟ್ರೋಗೆ ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ; ಮೊದಲ ದಿನವೇ ಉತ್ತಮ ರೆಸ್ಪಾನ್ಸ್‌

ಬೆಂಗಳೂರು; ನಿನ್ನೆಯಷ್ಟೇ ಲೋಕಾರ್ಪಣೆಯಾದ ನಮ್ಮ ಮೆಟ್ರೋ ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆಗೆ ಮೊದಲ ದಿನವೇ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮೊದಲ ದಿನವೇ 1669 ಮಂದಿ ಆನ್‌ಲೈನ್‌ ಮೂಲಕ ಟಿಕೆಟ್‌ ಖರೀದಿ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವದ ದಿನ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಇಂದಿನಿಂದ ಆನ್‌ಲೈನ್‌ ಟಿಕೆಟ್‌ ಖರೀದಿಗೆ ವ್ಯವಸ್ಥೆ ಮಾಡಿದ್ದು, ಮೊದಲ ದಿನವೇ ಆನ್ಲೈನ್ ಟಿಕೆಟ್‌ ಖರೀದಿ ಜೋರಾಗಿ ನಡೆಯುತ್ತಿದೆ.

ಮೊದಲ ದಿನವೇ ಆನ್‌ಲೈನ್‌ ಖರೀದಿ ಹೇಗೆ ಮಾಡುವುದು ಎಂದು 14,400 ಮಂದಿ ನಮ್ಮ ಮೆಟ್ರೊಗೆ ವಾಟ್ಸಾಪ್‌ನಲ್ಲಿ ಮಾಹಿತಿ ಕೇಳಿದ್ದಾರೆ. ಸರತಿ ಸಾಲು ತಪ್ಪಿಸಲು ಈ ಕ್ರಮ ಕೈಗೊಂಡಿದ್ದು, ಪ್ರಯಾಣಿಕರು ಇದರ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.

Share Post