ನಗ್ನ ವಿಡಿಯೋ ತೋರಿಸಿ ಮಹಿಳೆಯರಿಗೆ ಬ್ಲ್ಯಾಕ್ ಮೇಲ್; ಆರೋಪಿ ಅರೆಸ್ಟ್
ಬೆಂಗಳೂರು; ಮಹಿಳೆಯರ ನಗ್ನ ವಿಡಿಯೋಗಳನ್ನು ಸಂಗ್ರಹಿಸಿ, ಅವುಗಳನ್ನಿಟ್ಟುಕೊಂಡು ಹಲವು ಮಹಿಳೆಯರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮಹಾಂತೇಶ್ ಎಂಬಾತನನ್ನ ಬಂಧಿಸಲಾಗಿದೆ. ಆರೋಪಿ ಮಹಾಂತೇಶ್, ಹಲವು ಮಹಿಳೆಯರ ನಗ್ನ ವಿಡಿಯೋಗಳು ಹಾಗೂ ಫೋಟೋಗಳನ್ನು ಸಂಗ್ರಹಿಸಿದ್ದ. ಅವುಗಳನ್ನು ತೋರಿಸಿ ಮಹಿಳೆರಿಗೆ ಬ್ಲ್ಯಾಕ್ ಮೇಲೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಮಹಿಳೆಯೊಬ್ಬರಿಗೆ ಕರೆ ಮಾಡಿದ್ದ ಆರೋಪಿ ಮಹಾಂತೇಶ್, 30 ಲಕ್ಷ ರೂಪಾಯಿ ನೀಡುವಂತೆ ಡಿಮ್ಯಾಂಡ್ ಮಾಡಿದ್ದ. ಇಲ್ಲದಿದ್ದರೆ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡೋದಾಗಿ ಬೆದರಿಸಿದ್ದ. ಆದ್ರೆ ಇದಕ್ಕೆ ಜಗ್ಗದ ಮಹಿಳೆ ನಾರ್ತ್ ಈಸ್ಟ್ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.