CrimeDistricts

ದಾವಣಗೆರೆಯಲ್ಲಿ ಪಟಾಕಿ ಕಿಡಿ ಹಾರಿ ಮೆಡಿಕಲ್‌ ಗೋದಾಮು ಭಸ್ಮ

ದಾವಣಗೆರೆ; ದೀಪಾವಳಿ ಹಿನ್ನೆಲೆಯಲ್ಲಿ ಹಚ್ಚಿದ ಪಟಾಕಿ ಕಿಡಿ ಹಾರಿ ಮೆಡಿಕಲ್‌ ಏಜೆನ್ಸಿಯ ಗೋಡೌನ್‌ ಸಂಪೂರ್ಣ ಭಸ್ಮವಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಇಲ್ಲಿನ ಅಕ್ಕಮಹಾದೇವಿ ರಸ್ತೆಯಲ್ಲಿರುವ ಮೈಸೂರು ಮೆಡಿಕಲ್‌ ಕೆಮಿಕಲ್‌ ಏಜೆನ್ಸಿಯ ಗೋಡೌನ್‌ನಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಚಿದಂಬರ ದೀಕ್ಷಿತ್‌ ಹಾಗೂ ಅಶೋಕ್‌ ಕುಮಾರ್‌ ಎಂಬುವವವರಿಗೆ ಸೇರಿದ ಗೋಡೌನ್‌ ಇದೆಂದು ತಿಳಿದುಬಂದಿದೆ. ಈ ಗೋಡೌನ್‌ನಲ್ಲಿ ನಿನ್ನೆ ರಾತ್ರಿ 7.30ರ ಹೊತ್ತಿಗೆ ಪೂಜೆ ನಡೆಸಲಾಗಿತ್ತು. ಅನಂತರ ರಸ್ತೆಯಲ್ಲಿ ಸಂಸ್ಥೆಯ ಸಿಬ್ಬಂದಿ ಪಟಾಕಿ ಸಿಡಿಸಿದ್ದಾರೆ. ಇದೇ ವೇಳೆ ಗೋಡೌನ್‌ನಿಂದ ಹೊಗೆ ವಾಸನೆ ಬಂದಿದೆ. ಏನೆಂದು ಪರಿಶೀಲಿಸಿದಾಗ ಕಟ್ಟಡದ ಎಡರನೇ ಮಹಡಿಯಲ್ಲಿ ಬೆಂಕಿ ಆವರಿಸಿರುವುದು ಕಂಡುಬಂದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಎರಡು ಅಗ್ನಿ ಶಾಮಕ ಮಾಹನಗಳನ್ನು ತಂದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share Post