ವಡೋದರಾದಲ್ಲಿ ಗುಂಪು ಘರ್ಷಣೆ ಪ್ರಕರಣ; 19 ಮಂದಿ ಅರೆಸ್ಟ್
ವಡೋದರ; ಗುಜರಾತ್‌ನ ವಡೋದರಾದಲ್ಲಿ ಹಬ್ಬದ ದಿನವೇ ಗುಂಪು ಘರ್ಷಣೆ ನಡೆದಿದೆ. ಇದ್ರಿಂದಾಗಿ ಉದ್ರಿಕ್ತರು ಕೆಲ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದು, ಕಲ್ಲು ತೂರಾಟ ಕೂಡಾ ನಡೆದಿದೆ. ಇದ್ರಿಂದಾಗಿ ಸ್ಥಳದಲ್ಲಿ ಇನ್ನೂ ಉದ್ವಿಗ್ನ ಸ್ಥಿತಿ ಮುಂದವರೆದಿದೆ. ಪೊಲೀಸರು 19 ಮಂದಿಯನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಗಲಭೆಯಲ್ಲಿ ಭಾಗವಹಿಸಿದ್ದ 12 ಮಂದಿಯನ್ನು ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಗುರುತಿಸಲಾಗಿದೆ.
ಗಲಭೆ ಕಾರಣರಾದವರಲ್ಲಿ ಕೆಲವರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ಮುಂದುವರೆದಿದೆ. ಇನ್ನು ಘಟನಾ ಸ್ಥಳ ಬೂದಿ ಮುಚ್ಚಿದ ಕೆಂಡದಂತಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪರಿಸ್ಥಿತಿಯನ್ನು ಪೊಲೀಸರು ಹತೋಟಿಗೆ ತಂದಿದ್ದಾರೆ. ಅನುಮಾನಾಸ್ಪದವಾಗಿ ತಿರುಗಾಡುವವರ ಬಗ್ಗೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ.