NationalPolitics

ಬಿಜೆಪಿ ಜೊತೆ ಗೋವಾ ಕಾಂಗ್ರೆಸ್‌ ಶಾಸಕಾಂಗ ಪಕ್ಷ ವಿಲೀನ; ಸ್ಪೀಕರ್‌ ಒಪ್ಪಿಗೆ

ಪಣಜಿ; ಗೋವಾ ವಿಧಾನಸಭೆಯ ಕಾಂಗ್ರೆಸ್‌ ಶಾಸಕಾಂಗ ಪಕ್ಷವನ್ನು ಆಡಳಿತಾರೂಢ ಬಿಜೆಪಿ ಪಕ್ಷದೊಂದಿಗೆ ವಿಲೀನ ಮಾಡುವುದಕ್ಕೆ ಗೋವಾ ವಿಧಾನಸಭಾ ಸ್ಪೀಕರ್‌ ರಮೇಶ್‌ ತಾವಡ್ಕರ್‌ ಅಂಗೀಕರಿಸಿದ್ದಾರೆ. ಕಾಂಗ್ರೆಸ್ ಶಾಸಕರು ಸಲ್ಲಿಸಿದ ಪತ್ರವನ್ನು ಪರಿಶೀಲಿಸಿದಾಗ, ವಿಲೀನಕ್ಕೆ ಅಗತ್ಯವಿರುವ ಸಂಖ್ಯೆ ಅವರ ಬಳಿ ಇವೆ ಎಂಬುದು ಸಾಬೀತಾಗಿದ್ದರಿಂದ ಕಾಂಗ್ರೆಸ್‌ ಪಕ್ಷವನ್ನು ವಿಲೀನಗೊಳಿಸಲು ಒಪ್ಪಿಗೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್‌ 11 ಶಾಸಕರನ್ನು ಹೊಂದಿತ್ತು. ಇದರಲ್ಲಿ ಎಂಟು ಶಾಸಕರು ನಿನ್ನೆಯಷ್ಟೇ ಬಿಜೆಪಿ ಸೇರಿದ್ದರು. ಇವರೆಲ್ಲರೂ ಕಾಂಗ್ರೆಸ್‌ ಶಾಸಕಾಂಗ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸುವ ನಿರ್ಣಯವನ್ನು ತೆಗೆದುಕೊಂಡಿದ್ದರು.

Share Post