BengaluruCrime

ನಟಿ ಶ್ರೀಲೀಲಾ ತಾಯಿ ವಿರುದ್ಧ ಎಫ್‌ಐಆರ್‌; ಬಂಧನಕ್ಕಾಗಿ ಹುಡುಕಾಟ

ಬೆಂಗಳೂರು;  ಬಹುಭಾಷಾ ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಅವರ ಬಂದನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಖ್ಯಾತ ರಾಜಕಾರಣಿಯೊಬ್ಬರಿಗೆ ಅಲೆಯನ್ಸ್ ವಿಶ್ವ ವಿದ್ಯಾಲಯ ಮಾರಾಟ ಮಾಡಿಸುವ ವಿಚಾರವಾಗಿ ಸ್ವರ್ಣಲತಾ ವಿರುದ್ಧ ದೂರು ದಾಖಲಾಗಿದೆ. ಇದರ ಹಿಂದೆ ನೂರಾರು ಕೋಟಿ ಡೀಲ್ ಕೂಡ ಇದೆ ಎಂದು ಹೇಳಲಾಗುತ್ತಿದೆ.

ಮಧುಕರ್ ಅಂಗೂರ್ ಅವರಿಂದ ಯುನಿವರ್ಸಿಟಿ ಮಾರಾಟಕ್ಕೆ ಸ್ವರ್ಣಲತಾ ಡೀಲ್ ಕುದುರಿಸಿದ್ದರು ಎಂದು ಹೇಳಲಾಗಿದೆ. ಮಧುಕರ್ ಮತ್ತು ಸ್ವರ್ಣಲತಾ ಗೂಂಡಾಗಳ ಜೊತೆ ವಿವಿಗೆ ನುಗ್ಗಿ ಸಿಬ್ಬಂದಿಗೆ ಮತ್ತು ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಸೆ.10ರಂದು ಬಂದೂಕು ಹಿಡಿದ ಗೂಂಡಾಗಳ ಜೊತೆ ಸ್ವರ್ಣಲತಾ ವಿವಿಗೆ ನುಗ್ಗಿದ್ದರು ಎನ್ನಲಾಗುತ್ತಿದೆ.

Share Post