ಉತ್ತರ ಪ್ರದೇಶ ಬಿಜೆಪಿ ಶಾಸಕ ಹೃದಯಾಘಾತದಿಂದ ನಿಧನ
ಲಕ್ನೋ; ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಲಿಖಿಂಪುರಿ ಖೇರಿ ಜಿಲ್ಲೆಯ ಗೋಲ ಗೋಕ್ರನಾಥ್ ಕ್ಷೇತ್ರದ ಶಾಸಕ ಅರವಿಂದ್ ಗಿರಿ ಸಾವನ್ನಪ್ಪಿರುವವರು. ಹೃದಯಾಘಾತದ ಬಳಿಕ ಕೂಡಲೇ ಅರವಿಂದ್ ಗಿರಿ ಅವರನ್ನು ಚಿಕಿತ್ಸೆಗಾಗಿ ಲಕ್ನೋಗೆ ಕರೆದೊಯ್ಯುವಾಗ ಸೀತಾಪುರ ಬಳಿ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಅರವಿಂದ್ ಗಿರಿ ಅವರು ಲಖೀಂಪುರ ಖೇರಿ ಜಿಲ್ಲೆಯ ಗೋಲ ಗೋಕ್ರನಾಥ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದರು. ಅರವಿಂದ್ ಗಿರಿ ಅವರ ಸಾವಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಲಖಿಂಪುರ ಖೇರಿ ಜಿಲ್ಲೆಯ ಗೋಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಗಿರಿ ಅವರ ಸಾವು ದುರದೃಷ್ಟಕರವಾಗಿದೆ. ಮೃತರ ಕುಟುಂಬಸ್ಥರಿಗೆ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.