CrimeDistricts

ಚಿಕ್ಕಮಗಳೂರಲ್ಲಿ ಮಾರಾಮಾರಿ; ಯುವಕನ ಸ್ಥಿತಿ ಗಂಭೀರ

ಚಿಕ್ಕಮಗಳೂರು; ಇಲ್ಲಿ ಮಿಲನ ಚಿತ್ರಮಂದಿರದ ಬಳಿ ಎರಡು ಗುಂಪುಳ ನಡುವೆ ಮಾರಾಮಾರಿ ನಡೆದಿದೆ. ಮಚ್ಚು ಲಾಂಗುಗಳಿಂದ ಎರಡು ಗುಂಪುಗಳು ಬಡಿದಾಡಿಕೊಂಡಿದ್ದು, ಭರತ್‌ ಎಂಬಾತ ತೀವ್ರವಾಗಿ ಗಾಯಗೊಂಡಿದ್ದಾನೆ.

ಭರತ್‌ ನೆಲಕ್ಕೆ ಬಿದ್ದರೂ ಬಿಡದೇ ಮಚ್ಚು ಲಾಂಗ್‌ಗಳಿಂದ ದಾಳಿ ಮಾಡಲಾಗಿದೆ. ಭರತ್‌ ಸ್ಥಿತಿ ಗಂಭೀರವಾಗಿದ್ದು, ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ರವಾನಿಸಲಾಗಿದೆ.

Share Post