Districts

ಚಾಮುಂಡಿಗೆ ಆಷಾಢದಲ್ಲಿ ಭರ್ಜರಿ ಕಾಣಿಕೆ; ತಿಂಗಳಲ್ಲಿ 2.33 ಕೋಟಿ ಸಂಗ್ರಹ

ಮೈಸೂರು; ಆಷಾಢ ಮಾಸದಲ್ಲಿ ಚಾಮುಂಡಿ ದರ್ಶನ ಮಾಡಿದರೆ ಕಷ್ಟಗಳೆಲ್ಲಾ ಮಾಯವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಷಾಢ ಶುಕ್ರವಾರಗಳಂದು ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೇವಿಗೆ ಕಾಣಿಕೆ ಅರ್ಪಿಸುತ್ತಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಆಷಾಢದಲ್ಲಿ ದೇವಿಗೆ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈ ಬಾರಿ ಸಾರ್ವಜನಿಕರಿಗೆ ಅವಕಾಶ ಕೊಟ್ಟಿದ್ದರಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ದೇವಿಗೆ ದರ್ಶನ ಪಡೆದಿದ್ದಾರೆ. ಅಷ್ಟೇ ಅಲ್ಲ, ದೇವಿಗೆ ಭರ್ಜರಿ ಕಾಣಿಕೆಯನ್ನೂ ಆರ್ಪಿಸಿದ್ದಾರೆ. ಒಂದು ತಿಂಗಳಲ್ಲಿ ಬರೋಬ್ಬರಿ 2 ಕೋಟಿ 33 ಲಕ್ಷದ 51 ಸಾವಿರದ 2 ನೂರು ರೂಪಾಯಿಯಷ್ಟು ಕಾಣಿಕೆ ಸಂಗ್ರಹವಾಗಿದೆ. 

ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಆದ್ರೆ ಇದುವರೆಗೆ ಆಷಾಢ ಮಾಸದಲ್ಲಿ ದೇವಿಗೆ ಅರ್ಪಿಸಿದ ಕಾಣಿಕೆ ಈ ಮಟ್ಟಿಗೆ ಇರಲಿಲ್ಲ. ಇಲ್ಲಿಯವರೆಗೆ  1.59 ಕೋಟಿ ರೂ. ಅತೀ ಹೆಚ್ಚಿನ ಸಂಗ್ರಹಣೆಯಾಗಿತ್ತು. ಆದರೆ ಈ ವರ್ಷದ ಆಷಾಢ ಮಾಸದಲ್ಲಿ 2 ಕೋಟಿ ರೂಪಾಯಿ ದಾಟುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. 2,33,51,270 ರೂ.ಗಳಲ್ಲಿ 2,29,93,739 ರೂ. ನೋಟುಗಳು ಹಾಗೂ 3,57,531 ರೂ. ನಾಣ್ಯಗಳು ಸಂಗ್ರಹವಾಗಿದೆ. ಇದಕ್ಕದೆ ಟಿಕೆಟ್ ಕೌಂಟರ್  ನಿಂದ 1,03,69,270 ರೂ. ಆದಾಯ ಸಂಗ್ರಹವಾಗಿದೆ.

Share Post