ಸಿಂದಗಿ ಬಳಿ ಕಲ್ಲಿನಿಂದ ಜಜ್ಜಿ ಅಕ್ಕ-ತಮ್ಮನ ಕಗ್ಗೊಲೆ
ವಿಜಯಪುರ; ಅಕ್ಕ ಮತ್ತು ತಮ್ಮನನ್ನು ಕಟ್ಟಿಗೆ, ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಬೂದಿಹಾಳ ಪಿ.ಎಚ್. ಗ್ರಾಮದಲ್ಲಿ ನಡೆದಿದೆ. ರಾಜಶ್ರೀ ಶಂಕರಗೌಡ (32) ಮತ್ತು ನಾನಾಗೌಡ (29) ಕೊಲೆಗೀಡಾದವರು ಎಂದು ತಿಳಿದುಬಂದಿದೆ.
ರಾಜಶ್ರೀ ಪತಿ ಶಂಕರಗೌಡ ಹಾಗೂ ಇತರೆ ನಾಲ್ವರು ಸೇರಿ ಕೊಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬೂದಿಹಾಳ ಗ್ರಾಮದ ಹೊರ ಭಾಗದಲ್ಲಿ ಸೋಮವಾರ ಮಧ್ಯಾಹ್ನ ಘಟನೆ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಯಾದವರು ದೇವರ ನಾವದಗಿ ಗ್ರಾಮದಲ್ಲಿ ವಾಸ ಮಾಡುತ್ತಿದ್ದರು ಎನ್ನಲಾಗಿದೆ.