CinemaCrime

ಲಗೋರಿ ಚಿತ್ರದ ನಟ ಸತೀಶ್‌ ವಜ್ರ ಬರ್ಬರ ಹತ್ಯೆ

ಬೆಂಗಳೂರು; ಸ್ಯಾಂಡಲ್​​​ವುಡ್​​ನಲ್ಲಿ ಲಗೋರಿ ಎಂಬ ಸಿನಿಮಾದಲ್ಲಿ‌ ನಟಿಸಿದ್ದ ಸತೀಶ್ ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.  ಆರ್.ಆರ್.ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಪಟ್ಟಣಗೆರೆ ಮನೆಯಲ್ಲಿ ಸತೀಶ್‌ ರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಸತೀಶ್‌ ಅವರ ಬಾಮೈದನೇ ಈ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಸತೀಶ್ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು. ಅಕ್ಕ ಆತ್ಮಹತ್ಯೆಗೆ ಸತೀಶ್‌ ಅವರೇ ಕಾರಣ ಎಂದು ಬಾಮೈದನೇ ಈ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.  ಸ್ಥಳಕ್ಕೆ ಆರ್‌ಆರ್‌ ನಗರ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

 

Share Post