BengaluruPolitics

ಬಿ.ವೈ.ವಿಜಯೇಂದ್ರ ಮುಂದಿನ ಸಿಎಂ..? ; ರಾಜ್ಯ ಬಿಜೆಪಿ ಗರಿಗೆದರಿದ ಚರ್ಚೆ

ಬೆಂಗಳೂರು; ಮಾಜಿ ಸಿಎಂ ಯಡಿಯೂರಪ್ಪ ಅವರ ಮಗ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರ ಹೆಸರು ಮತ್ತೆ ಮುನ್ನಲೆಗೆ ಬಂದಿದೆ. ವಿಧಾನಪರಿಷತ್‌ಗೆ ಆಯ್ಕೆ ಮಾಡಿ ಅವರನ್ನು ಮಂತ್ರಿ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ರೆ ಅದು ಕೈಗೂಡಲಿಲ್ಲ. ಆದ್ರೆ ಇದೀಗ ವಿಜಯೇಂದ್ರ ಅವರೇ ಮುಂದಿನ ಸಿಎಂ ಎಂಬ ಕೂಗು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿದೆ. ನಿನ್ನೆ ಮಂಡ್ಯದಲ್ಲಿ ಮಾತನಾಡಿದ್ದ ಸಚಿವ ಕೆ.ಸಿ.ನಾರಾಯಣಗೌಡ ಅವರು, ವಿಜಯೇಂದ್ರಗೆ ಸಿಎಂ ಆಗುವ ಎಲ್ಲಾ ಲಕ್ಷಣಗಳೂ ಇವೆ ಎಂದು ಹೇಳಿದ್ದರು.

ಈ ನಡುವೆ ಸಚಿವ ನಿರಾಣಿ ಕೂಡಾ ವಿಜಯೇಂದ್ರ ಪರ ಬ್ಯಾಟ್‌ ಬೀಸಿದ್ದಾರೆ. ಸಿಎಂ ಮಗ ಸಿಎಂ ಆದರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ. ವಿಜಯೇಂದ್ರಗೆ ನಾಯಕನಾಗೋ ಕ್ವಾಲಿಟಿ ಇದೆ. ಅವರು ಸಿಎಂ ಆದರೆ ಸಂತೋಷ ಎಂದು ನಿರಾಣಿ ಹೇಳಿದ್ದಾರೆ. ಇನ್ನು ಈ ಬಗ್ಗೆ ವಿಜಯಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯೇಂದ್ರ ಇನ್ನೂ ಯುವಕನಿದ್ದಾನೆ. ಕೆಲಸ ಮಾಡುತ್ತಿದ್ದಾನೆ, ಯುವಕರಲ್ಲಿ ದೊಡ್ಡ ವಿಶ್ವಾಸವಿದೆ. ಮುಂದೆ ಬೆಳೆಯುತ್ತಾನೆ ಎಂಬ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಹೀಗಾಗಿ ವಿಜಯೇಂದ್ರ ವಿಚಾರವಾಗಿ ರಾಜ್ಯ ಬಿಜೆಪಿಯಲ್ಲಿ ದೊಡ್ಡ ಚರ್ಚೆ ಶುರುವಾಗಿದೆ.

Share Post