ಅಫ್ಘಾನಿಸ್ತಾನದಲ್ಲಿ ಪಾಕ್ ಉಗ್ರ ಸಂಘಟನೆಗಳಿಂದ ತರಬೇತಿ
ವಿಶ್ವಸಂಸ್ಥೆ; 26/11 ಮುಂಬೈ ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ ನೇತೃತ್ವದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಏ-ತೈಬಾ ಉಗ್ರ ಸಂಘಟನೆಗಳು ಆಫ್ಘಾನಿಸ್ತಾನದ ಕೆಲವು ಪ್ರಾಂತ್ಯಗಳಲ್ಲಿ ತಮ್ಮ ತರಬೇತಿ ಶಿಬಿರಗಳನ್ನು ನಿರ್ವಹಿಸುತ್ತಿವೆ ಹಾಗೂ ಇವು ನೇರವಾಗಿ ತಾಲಿಬಾನ್ ನಿಯಂತ್ರಣದಲ್ಲಿವೆ ಎಂದು ಯುಎನ್ ವರದಿ ಮಾಡಿದೆ.
ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮಾನಿಟರಿಂಗ್ ತಂಡದ 13ನೇ ವರದಿಯ ಪ್ರಕಾರ ಜೈಶ್-ಏ-ಮೊಹಮ್ಮದ್(JeM), ತಾಲಿಬಾನ್ಗೆ ಸೈದ್ಧಾಂತಿಕವಾಗಿ ಹತ್ತಿರವಿರುವ ಗುಂಪು ನಂಗರ್ಹಾರ್ನಲ್ಲಿ ಎಂಟು ತರಬೇತಿ ಶಿಬಿರಗಳನ್ನು ನಿರ್ವಹಿಸುತ್ತಿದೆ, ಅವುಗಳಲ್ಲಿ ಮೂರು ನೇರವಾಗಿ ತಾಲಿಬಾನ್ ಅಡಿಯಲ್ಲಿ ಕೆಲಸ ಮಾಡುತ್ತಿವೆ ಎಂದು ಉಲ್ಲೇಖಿಸಲಾಗಿದೆ.
1988ರ ನಿರ್ಬಂಧಗಳ ಸಮಿತಿ ಎಂದು ಕರೆಯಲ್ಪಡುವ ತಾಲಿಬಾನ್ ನಿರ್ಬಂಧಗಳ ಸಮಿತಿಯ ಅಧ್ಯಕ್ಷರಾಗಿ ಯುಎನ್ ರಾಯಭಾರಿಗೆ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ ಅವರು ಈ ವರದಿಯನ್ನು ರವಾನಿಸಿದ್ದಾರೆ.