International

ಸೌದಿಯಲ್ಲಿ ಕೊವಿಡ್‌ ಭೀತಿ; ಭಾರತ ಸೇರಿ 15 ದೇಶಗಳಿಗೆ ತೆರಳದಂತೆ ನಿರ್ಬಂಧ

ನವದೆಹಲಿ; ಕೊವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಭಾರತ ಸೇರಿ ಹದಿನೈದು ದೇಶಗಳಿಗೆ ತೆರಳದಂತೆ ಸೌದಿಅರೇಬಿಯಾ ಸರ್ಕಾರ ಅಲ್ಲಿನ ಜನರಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ದೇಶದ ಪ್ರಜೆಗಳು ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ಬೆಳೆಸುವಂತಿಲ್ಲ ಎಂದು ಸೌದಿ ಅರೇಬಿಯಾ ಸರ್ಕಾರದ ಪಾಸ್‌ಪೋರ್ಟ್‌ ಇಲಾಖೆ ಹೇಳಿದೆ.

ಭಾರತ, ಲೆಬನಾನ್‌, ಸಿರಿಯಾ, ಟರ್ಕಿ, ಅಫ್ಘಾನಿಸ್ತಾನ, ಯೆಮನ್, ಸೊಮಾಲಿಯಾ, ಇಥಿಯೋಪಿಯ, ಕಾಂಗೊ, ಲಿಬಿಯಾ, ಇಂಡೋನೇಶಿಯಾ, ವಿಯಾಟ್ನಂ, ಅರ್ಮೇನಿಯ, ಬೆಲಾರಸ್‌ ಮತ್ತು ವೆನಿಜುಲಾ ದೇಶಗಳಲ್ಲಿ ಕೊವಿಡ್‌ ಹೆಚ್ಚಾಗುತ್ತಿದೆ. ಹೀಗಾಗಿ ನಾಗರಿಕ ಈ ದೇಶಗಳಿಗೆ ಪ್ರಯಾಣ ಮಾಡಬಾರದು ಎಂದು ತಾಕೀತು೮ ಮಾಡಲಾಗಿದೆ. ಇನ್ನು ಉತ್ತರ ಕೋರಿಯಾದಲ್ಲೂ ಕೋವಿಡ್‌ ಪ್ರಕರಣಗಳು ಪತ್ತೆಯಾಗಿರುವುದರಿಂದ ಅಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ಚೀನಾದಲ್ಲೂ ಕೆಲವೆಡೆ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ನಡುವೆ ಕೆಲ ಆಫ್ರಿಕನ್‌–ಯುರೋಪ್‌ ದೇಶಗಳಲ್ಲಿ ಮಂಕಿ ಫಾಕ್ಸ್‌ ವೈರಸ್‌ ಹರಡುತ್ತಿರುವುದರಿಂದ ಮಂಜಾಗ್ರತೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.

Share Post