ನಾಡಗೀತೆಗೆ ಅವಮಾನಿಸಿದ್ದ ಹಳೇ ಪೋಸ್ಟ್ ಮುನ್ನೆಲೆಗೆ; ಚಕ್ರತೀರ್ಥ ವಿರುದ್ಧ ಕಿಡಿ
ಬೆಂಗಳೂರು; ಪಠ್ಯಪುಸ್ತಕಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಆಕ್ರೋಶಗಳು ಮುಂದುವರೆದಿದೆ. ಇವತ್ತು ಕಾಂಗ್ರೆಸ್ ನಾಯಕರು ಹಾಗೂ ಪ್ರಗತಿಪರರು, ಹಳೇ ಫೇಸ್‌ಬುಕ್ ಪೋಸ್ಟ್ ಒಂದನ್ನು ಹೆಸರಿಸಿ ಚಕ್ರತೀರ್ಥ ವಿರುದ್ಧ ಮುಗಿಬಿದ್ದಿದ್ದಾರೆ. ಈ ಬಗ್ಗೆ ವಿಪಕ್ಷ ನಾಯಯ ಸಿದ್ದರಾಮಯ್ಯ ಅವರು ಕೂಡಾ ಟ್ವೀಟ್ ಮಾಡಿದ್ದಾರೆ.
ನಾಡಗೀತೆಯನ್ನು ಅವಹೇಳನ ಮಾಡಿದ, ರಾಷ್ಟ್ರಕವಿಯನ್ನು ಗೇಲಿ ಮಾಡಿದ ಇಂತಹ ಒಬ್ಬ ಕಿಡಿಗೇಡಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ @BJP4Karnataka ಸರ್ಕಾರಕ್ಕೆ ಮಾನ-ಮರ್ಯಾದೆ ಏನಾದರೂ ಇದ್ದರೆ ಮೊದಲು ಈತನನ್ನು ಕಿತ್ತುಹಾಕಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಇನ್ನೂ ಒಂದಷ್ಟು ಪ್ರಗತಿಪರರು ಇದೇ ಪೋಸ್ಟ್‌ನ್ನು ಮುಂದಿಟ್ಟುಕೊಂಡು ರೋಹಿತ್ ಚಕ್ರತೀರ್ಥ ವಿರುದ್ಧ ಕಿಡಿಕಾರುತ್ತಿದ್ದಾರೆ.
ಕುವೆಂಪು ರಚಿತ ನಾಡಗೀತೆಯನ್ನು ವ್ಯಂಗ್ಯ ಮಾಡಿ ರೋಹಿತ್ ಚಕ್ರತೀರ್ಥ 2017 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟನ್ನು ಈಗ ನೆನಪಿಸಿದ್ದಾರೆ. ಇದರ ವಿರುದ್ಧ ಪೋಲೀಸ್ ಠಾಣೆಯಲ್ಲಿ ಅಂದು ದೂರು ಕೂಡ ದಾಖಲಾಗಿತ್ತು. ಇದೀಗ ಮತ್ತೆ ಈ ಪೋಸ್ಟ್ ಮುನ್ನೆಲೆಗೆ ಬಂದಿದೆ.