National

ಕಾರ್ತಿ ಮನೆ ಮೇಲೆ ದಾಳಿ; ಇದು ದಾಖಲೆ ರೇಡ್‌ ಎಂದ ಚಿದಂಬರಂ ಪುತ್ರ

ಮುಂಬೈ; ಕಾಂಗ್ರೆಸ್‌ ನಾಯಕ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರ ಆಸ್ತಿಗಳ ಮೇಲೆ ಸಿಬಿಐ ದಾಳಿ ಮಾಡಿದೆ. ಅವರಿಗೆ ಸೇರಿದ ಮುಂಬೈ ಮತ್ತು ಚೆನ್ನೈನಲ್ಲಿರುವ ಮನೆ ಹಾಗೂ ಕಚೇರಿಗಳಲ್ಲಿ ಇಂದು ಬೆಳಗ್ಗಿನಿಂದಲೇ ಪರಿಶೀಲನೆ ನಡೆಸಲಾಗುತ್ತಿದೆ. 2010-14ರ ನಡುವೆ ವಿದೇಶಕ್ಕೆ ಹಣ ವರ್ಗಾವಣೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಕಾರ್ತಿ ಚಿದಂಬರಂಗೆ ಸೇರಿದ ಒಟ್ಟು 7 ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕಾರ್ತಿ ಚಿದಂಬರಂ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಅವರ ಪುತ್ರ. ದಾಳಿಯ ಹಿನ್ನೆಲೆಯಲ್ಲಿ ಚೆನ್ನೈನಲ್ಲಿರುವ ಅವರ ನಿವಾಸದೆದುರು ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಈ ಕುರಿತು ಟ್ವೀಟ್‌ ಮಾಡಿರುವ ಕಾರ್ತಿ ಚಿದಂಬರಂ, ನನ್ನ ಮೇಲೆ ಅದೆಷ್ಟು ಬಾರಿ ದಾಳಿ?, ನಾನು ಸಂಖ್ಯೆಯನ್ನೇ ಮರೆತುಬಿಟ್ಟಿದ್ದೇನೆ. ಬಹುಶ: ಇದೊಂದು ದಾಖಲೆ ಎಂದು ಬರೆದುಕೊಂಡಿದ್ದಾರೆ.

Share Post