Cinema

ಮೈಸೂರು ಹುಡುಗನ ಜೊತೆ ರಾಖಿ ಸಾವಂತ್‌ ಲವ್ವಿಡವ್ವಿ; ಸಿಕ್ತಾ ದುಬಾರಿ ಉಡುಗೊರೆ..?

ಮುಂಬೈ; ನಾನಾ ಕಾರಣಗಳಿಗಾಗಿ ಸದಾ ಸುದ್ದಿಯಲ್ಲಿರುವ ಬಾಲಿವುಡ್‌ ವಿವಾದಿತ ಮಾದಕ ನಟಿ ರಾಖಿ ಸಾವಂತ್‌ಗೆ ಈಗ ಹೊಸ ಬಾಯ್‌ಫ್ರೆಂಡ್‌ ಸಿಕ್ಕಿದೆ. ಆತ ನಮ್ಮ ಕರ್ನಾಟಕದ ಮೈಸೂರಿನವನು ಎಂಬುದು ಕುತೂಹಲದ ವಿಚಾರ. ಈ ಹಿಂದೆ ರಾಖಿಸಾವಂತ್‌ ಸ್ವಯಂವರ ನಡೆಸಿದ್ದಳು. ಅದರ ಜೊತೆ ಹಲವರ ಜೊತೆ ಸುತ್ತಾಡಿದ್ದಳು. ಕೆಲ ವರ್ಷಗಳ ಹಿಂದೆ ಮದುವೆಯೂ ಆಗಿದ್ದಳು. ಇದೀಗ ರಾಖಿ ಸಾವಂತ್‌ ಮೈಸೂರಿನ ಹುಡುಗನ ಜೊತೆ ಲವ್ವಿಡವ್ವಿ ಶುರು ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ.

ಆದಿಲ್‌ ಖಾನ್‌ ದುರಾನಿ ಎಂಬಾತನೇ ರಾಖಿ ಸಾವಂತ್‌ ಹೊಸ ಬಾಯ್‌ಫ್ರೆಂಡ್‌ ಎಂದು ಹೇಳಲಾಗುತ್ತಿದೆ. ಅವರಿಬ್ಬರ ಫೋಟೋಗಳು ಈಗ ಎಲ್ಲೆಡೆ ವೈರಲ್‌ ಆಗುತ್ತಿವೆ. ಇದೀಗ ಆದಿಲ್‌ ಖಾನ್‌ ಅವರು ರಾಖಿಗೆ ಹೊಸ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ರಾಖಿ ಸಾವಂತ್‌ ಬಟ್ಟೆ ಬದಲಿಸಿದಂತೆ ಬಾಯ್‌ಫ್ರೆಂಡ್‌ಗಳನ್ನು ಬದಲಿಸುತ್ತಿರುತ್ತಾರೆ. ಆದ್ರೆ, ಆದಿಲ್‌ ಜೀವನ ಪೂರ್ತಿ ನನ್ನ ಜೊತೆಗೆ ಇರುತ್ತಾರೆ ಎಂದು ರಾಖಿ ಹೇಳಿಕೊಂಡಿದ್ದಾರೆ.

ಈ ಕುರಿತು ರಾಖಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆ ಹೊಸ ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡಿರುವ ರಾಖಿ, ‘ಸ್ವೀಟ್ ಹಾರ್ಟ್, ನನ್ನ ಜೀವನ’ ಎಂದು ಸೊಗಸಾಗಿ ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಸಿಂಗಲ್ ಅಲ್ಲ ಎನ್ನುವುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ಹುಡುಗ ಯಾರು ಅಂತೀರಾ? ಅವನ ಹೆಸರು ಆದಿಲ್ ಖಾನ್ ದುರಾನಿ. ಅವನನ್ನು ಪರಿಚಯ ಮಾಡಿಕೊಡುತ್ತಾ, ಅವನನ್ನು ಮುದ್ದು ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

 

Share Post