International

ನೇಪಾಳದಲ್ಲಿ ಕಂದಕಕ್ಕೆ ಉರುಳಿದ ಜೀಪ್‌; 14 ಮಂದಿ ದುರ್ಮರಣ

ಕಠ್ಮಂಡು; ನೇಪಾಳದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಜೀಪ್‌ ಕಂದಕಕ್ಕೆ ಉರುಳಿ 14 ಮಂದಿ ಸಾವನ್ನಪ್ಪಿದ್ದು, ಹತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆಗೆ ಮತದಾರರನ್ನು ಕರೆದೊಯ್ಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ನೇಪಾಳದ ಸ್ಯಾಂಜಾ ಜಿಲ್ಲೆಯ ಅರ್ಖಾಲ್‌ಬಸ್‌ ಎಂಬಲ್ಲಿನ ಗುಡ್ಡಗಾಡು ರಸ್ತೆಯಲ್ಲಿ ಜೀಪ್‌ ನಿಯಂತ್ರಣ ತಪ್ಪಿ ಸುಮಾರು 500 ಮೀಟರ್‌ ಆಳದ ಕಂದಕಕ್ಕೆ ಉರುಳಿದೆ. ಇಂದು ನೇಪಾಳದಾದ್ಯಂತ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ.

Share Post