ಲೈಂಗಿಕ ಕಾರ್ಯಕರ್ತೆಯನ್ನು ತುಂಡು ತುಂಡು ಮಾಡಿ ಟ್ರ್ಯಾಲಿಗೆ ತುಂಬಿದ ವ್ಯಕ್ತಿ!
ಚೆನ್ನೈ; ಗ್ರಾಹಕನೊಬ್ಬ ಹಣಕಾಸಿನ ವಿಚಾರದಲ್ಲಿ ಜಗಳ ತೆಗೆದು ಲೈಂಗಿಕ ಕಾರ್ಯಕರ್ತೆಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ.. ಅನಂತರ ಹತ್ತಿರದಲ್ಲೇ ಇದ್ದ ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತಿದ್ದ ಟ್ರ್ಯಾಲಿಯಲ್ಲಿ ಆ ಮಹಿಳೆಯ ದೇಹದ ತುಂಡು ಹಾಕಿ ಪರಾರಿಯಾಗಿದ್ದ ಘಟನೆ ನಡೆದಿದೆ.. ಚೆನ್ನೈನ ತುರೈಪಾಕ್ಕಂ ಎಂಭಲ್ಲಿ ಈ ಘಟನೆ ನಡೆದಿದೆ..
32 ವರ್ಷ ದೀಪಾ ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದಾಳೆ.. ಈಕೆ ಮಾದಾವರಂ ನಿವಾಸಿಯಾಗಿದ್ದು, ಸ್ನೇಹಿತರೊಬ್ಬರ ಮುಖಾಂತರ ಲೈಂಗಿಕ ಕಾರ್ಯಕರ್ತೆಯಾಗಿದ್ದ ದೀಪಾಳನ್ನು ಶಿವಗಂಗೆ ಜಿಲ್ಲೆಯ ಮಣಿಕಂಠನ್ ಎಂಬಾತ ಪರಿಚಯ ಮಾಡಿಕೊಂಡು ಕರೆಸಿಕೊಂಡಿದ್ದ.. ಆದ್ರೆ ಹಣ ನೀಡುವ ವಿಚಾರದಲ್ಲಿ ಜಗಳ ನಡೆದು ಆತನೇ ಈ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.. ಪೊಲೀಸರು ಆತನನನ್ನು ಬಂಧಿಸಿದ್ದು, ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ..
ಹ್ಯಾಮರ್ ಬಳಸಿ ಭೀಕರವಾಗಿ ಕೊಲ್ಲಲಾಗಿದೆ.. ಟ್ರ್ಯಾಲಿಯಲ್ಲಿ ಮಹಿಳೆಯ ದೇಹ ತುಂಡು ತುಂಡಾಗಿ ಬಿದ್ದಿರುವುದನ್ನು ಕಟ್ಟಡ ಕಾರ್ಮಿಕರು ನೋಡಿದ್ದು, ಪೊಲೀಸರಿಗೆ ಸುದ್ದಿ ತಿಳಿಸಿದ್ದರು.. ಇನ್ನೊಂದೆಡೆ ದೀಪಾ ಸಹೋದರ ಕೂಡಾ ತಮ್ಮ ಸಹೋದರಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.. ದೀಪಾ ಸಹೋದರ ಶವವನ್ನು ಇದು ತಮ್ಮ ಸಹೋದರಿಯದ್ದೇ ಎಂದು ಗುರುತಿಸಿದ್ದಾನೆ..