National

ಕಬಡ್ಡಿ ಆಟಗಾರ್ತಿ ಮೇಲೆ ರೈಲಿನಲ್ಲೇ ಅತ್ಯಾಚಾರ

ಭಿವಾನಿ: ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ವ್ಯಕ್ತಿಯೊಬ್ಬ ಕಬಡ್ಡಿ ಆಟಗಾರ್ತಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಹರಿಯಾಣದ ಭಿವಾನಿ ಬಳಿ ನಡೆದಿದೆ. ರೈಲಿನ ಶೌಚಾಲಯದಲ್ಲಿ ಈ ದುಷ್ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದ್ದು, ಇದೀಗ ಆರೋಪಿ ವಿರುದ್ಧ ದೂರು ದಾಖಲಿಸಲಾಗಿದೆ. 

    ಹರಿಯಾಣದ ದಂಗರ್​ ಗ್ರಾಮದ ನಿವಾಸಿ ಮೋನು ಎಂಬುವವರು ತನ್ನ ಮಗಳನ್ನ ಕಬಡ್ಡಿ ತರಬೇತಿಗೋಸ್ಕರ ಫೆಬ್ರವರಿಯಲ್ಲಿ ಇಂದೋರ್​ನ ಕಬಡ್ಡಿ ಅಕಾಡೆಮಿಗೆ ಕರೆದೊಯ್ದಿದ್ದರು. ಆದರೆ, ಕೆಲ ತಿಂಗಳ ನಂತರ ಅಲ್ಲಿನ ವಾತಾವರಣ ಸರಿ ಬಾರದ ಕಾರಣ ತಮ್ಮ ಮಗಳನ್ನ ವಾಪಸ್ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ರೈಲಿನಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಆರೋಪಿಯೋರ್ವ ನಶೆ ಬರುವ ಪದಾರ್ಥ ನೀಡಿದ್ದಾನೆ . ಇದರ ಬೆನ್ನಲ್ಲೇ ಆಕೆಯನ್ನ ಶೌಚಾಲಯದೊಳಗೆ ಕರೆದುಕೊಂಡು ಹೋಗಿ, ದುಷ್ಕೃತ್ಯವೆಸಗಿದ್ದಾನೆ ಎಂದು ಸಂತ್ರಸ್ತೆ ತಾಯಿ ಆರೋಪಿಸಿದ್ದಾರೆ. ಆರೋಪಿ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.

Share Post