ʻವಾಮನʼ ಶೂಟಿಂಗ್ ವೇಳೆ ನಡೆದಿದ್ದೇನು..?; ಗಾಯ ಮಾಡಿಕೊಂಡ ಧನ್ವೀರ್
ಬೆಂಗಳೂರು: ನಟ ಧನ್ವೀರ್ ಗೌಡ ಅವರು ಹೊಸ ಚಿತ್ರ ವಾಮನದಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ವೇಳ ನಾಯಕ ನಟ ಧ್ನ್ವೀರ್ ಗೌಡ ಕೈ ಪೆಟ್ಟು ಮಾಡಿಕೊಂಡಿದ್ದಾರೆ. ಫೈಟಿಂಗ್ ದೃಸ್ಯದ ಚಿತ್ರೀಕರಣದ ವೇಳೆ ಧನ್ವೀರ್ಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಕೈಗೆ ಕೊಂಚ ಗಾಯವಾಗಿದ್ದು, ಅದಕ್ಕೆ ಅವರು ಬ್ಯಾಂಡೇಜ್ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಅದರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಗಾಯವಾದ ಮೇಲೆ ಕೆಲಹೊತ್ತು ಬ್ರೇಕ್ ಪಡೆದ ನಂತರ ಧನ್ವೀರ್ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ.